ಬರ್ಮಿಂಗ್‌ಹ್ಯಾಮ್: ಭಾರತ ಹಾಕಿ ತಂಡದ ಹರ್ಮನ್‌ಪ್ರೀತ್ ಸಿಂಗ್ ಮತ್ತು ಆಕಾಶದೀಪ್ ಸಿಂಗ್ ಅವರು ಮೂಡಿಸಿದ ಮಿಂಚಿನ ಸಂಚಲನದ ಮುಂದೆ ಕೆನಡಾ ಮಂಕಾಯಿತು.

ಕಾಮನ್‌ವೆಲ್ತ್ ಕ್ರೀಡಾಕೂಟದದಲ್ಲಿ ಬುಧವಾರ ನಡೆದ ಪುರುಷರ ಬಿ ಗುಂಪಿನ ಹಾಕಿ ಪಂದ್ಯದಲ್ಲಿ ಭಾರತ ತಂಡವು 8–0ಯಿಂದ ಕೆನಡಾ ವಿರುದ್ಧ ಅಧಿಕಾರಯುತ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತು.

ಹರ್ಮನ್‌ಪ್ರೀತ್ (7ನಿ, 54ನೆ, ನಿಮಿಷ) ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳನ್ನಾಗಿ ಪರಿವರ್ತಿಸಿದರು. ಆಕಾಶ್ ದೀಪ್ (38ನಿ, 60ನೇ ನಿ) ಎರಡು ಫೀಲ್ಡ್ ಗೋಲುಗಳನ್ನು ದಾಖಲಿಸಿದರು. ಅಮಿತ್ ರೋಹಿದಾಸ್ (10ನಿ), ಲಲಿತ್ ಉಪಾಧ್ಯಾಯ (20ನಿ), ಗುರ್ಜಂತ್ ಸಿಂಗ್ (27ನಿ) ಮತ್ತು ಮನದೀಪ್ ಸಿಂಗ್ (58ನಿ) ತಂಡದ ಗೆಲುವಿಗೆ ಬಲ ತುಂಬಿದರು.

ಪಂದ್ಯದ ಕೊನೆಯ ಆರು ನಿಮಿಷಗಳಲ್ಲಿಯೇ ಭಾರತ ತಂಡವು ಮೂರು ಗೋಲುಗಳನ್ನು ಗಳಿಸಿತು.ಈ ಗೆಲುವಿನಿಂದಾಗಿ ಗುಂಪಿನ ಅಂಕಪಟ್ಟಿಯಲ್ಲಿ ಭಾರತವು ಅಗ್ರಸ್ಥಾನಕ್ಕೇರಿತು. ಗುರುವಾರ ನಡೆಯಲಿರುವ ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತ ತಂಡವು ವೇಲ್ಸ್ ಎದುರು ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.