ಬುಧವಾರ, ಜೂನ್ 23, 2021
30 °C

ಏಷ್ಯಾ ಬ್ಯಾಡ್ಮಿಂಟನ್: ಸಿಂಧು, ಸೈನಾ, ಸಮೀರ್‌ ಪರಾಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವುಹಾನ್‌, ಚೀನಾ: ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಮತ್ತು ಸಮೀರ್‌ ವರ್ಮಾ ಅವರ ಸೋಲಿನೊಂದಿಗೆ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

ಶನಿವಾರ ನಡೆದ ಮಹಿಳೆಯರ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೈನಾ ಜಪಾನ್‌ನ ಅಕಾನೆ ಯಮಗುಚಿ ಎದುರು 13–21, 23–21, 16–21ರಲ್ಲಿ ಸೋತರು. ಸಿಂಧು ಚೀನಾದ ಕಾಯ್‌ ಯನ್ಯಾನ್‌ ಎದುರು 19–21, 9–21ರಲ್ಲಿ ಸೋತರು.

ಏಳನೇ ಶ್ರೇಯಾಂಕ ಹೊಂದಿದ್ದ ಸೈನಾ ಎದುರಾಳಿಗೆ ಪ್ರಬಲ ಪೈಪೋಟಿ ನೀಡಿದರು. ಮೊದಲ ಗೇಮ್‌ನಲ್ಲಿ ಹೆಚ್ಚು ಪರಿಶ್ರಮವಿಲ್ಲದೆ ಗೆದ್ದ ಯಮಗುಚಿಗೆ ಎರಡನೇ ಗೇಮ್‌ನಲ್ಲಿ ಭಾರತದ ಆಟಗಾರ್ತಿ ತಿರುಗೇಟು ನೀಡಿದರು. ಮೂರನೇ ಗೇಮ್‌ನಲ್ಲೂ ಸೈನಾ ಕೆಚ್ಚೆದೆಯಿಂದ ಕಾದಾಡಿದರು. ಆದರೆ ಗೆಲುವು ಯಮಗುಚಿಗೆ ಒಲಿಯಿತು. ಪಂದ್ಯ ಒಟ್ಟು ಒಂದು ತಾಸು ಮತ್ತು ಒಂಬತ್ತು ನಿಮಿಷ ನಡೆಯಿತು.

ಸಿಂಧು ಚೀನಾದ ಆಟಗಾರ್ತಿಗೆ ಸುಲಭವಾಗಿ ಮಣಿದರು. 31 ನಿಮಿಷಗಳ ಪಂದ್ಯದ ಯಾವ ಹಂತದಲ್ಲೂ ಸಿಂಧು ಎದುರಾಳಿಗೆ ಸರಿಸಾಟಿಯಾಗಲಿಲ್ಲ.  ಎರಡನೇ ಗೇಮ್‌ನಲ್ಲಂತೂ ಸಂಪೂರ್ಣ ವೈಫಲ್ಯ ಕಂಡರು. ಯಾನ್ಯಾನ್ ಎದುರು ಸಿಂಧುಗೆ ಇದು ಮೊದಲ ಸೋಲು.

ಸಮೀರ್‌ ವರ್ಮಾ ಅವರನ್ನು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ಶಿ ಯೂಕಿ 21–10, 21–12ರಲ್ಲಿ ಮಣಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು