ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಹಾಕಿ: ಭಾರತ ತಂಡಕ್ಕೆ ಕೋವಿಡ್ ಕಂಟಕ

Last Updated 9 ಡಿಸೆಂಬರ್ 2021, 16:10 IST
ಅಕ್ಷರ ಗಾತ್ರ

ಡಾಂಗೆ, ದಕ್ಷಿಣ ಕೊರಿಯಾ: ಏಷ್ಯನ್ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ನಿಂದ ಭಾರತ ತಂಡವು ಹೊರಬಿದ್ದಿದೆ. ತಂಡದಲ್ಲಿ ಆಟಗಾರ್ತಿಯೊಬ್ಬರಿಗೆ ಕೋವಿಡ್ ಖಚಿತಪಟ್ಟಿದ್ದರಿಂದ ಟೂರ್ನಿಯಿಂದ ನಿರ್ಗಮಿಸಿದೆ.

ಇದರೊಂದಿಗೆ ಕೋವಿಡ್ ಕಾರಣದಿಂದಾಗಿ ನಿರ್ಗಮಿಸಿದ ಎರಡನೇ ತಂಡವಾಗಿದೆ. ಈಚೆಗೆ ಮಲೇಷ್ಯಾ ತಂಡದ ಆಟಗಾರ್ತಿಗೆ ಕೋವಿಡ್ ಖಚಿತಪಟ್ಟಿತ್ತು.

ಬುಧವಾರ ಭಾರತ ತಂಡದ ಆಟಗಾರ್ತಿಯೊಬ್ಬರಿಗೆ ಕೋವಿಡ್ ಇರುವುದು ಖಚಿತವಾದ ಮೇಲೆ ಹಾಲಿ ಚಾಂಪಿಯನ್ ಕೊರಿಯಾ ಮತ್ತು ಚೀನಾ ವಿರುದ್ಧದ ಪಂದ್ಯಗಳನ್ನು ರದ್ದುಮಾಡಲಾಗಿತ್ತು.

‘ಸೋಂಕಿತ ಆಟಗಾರ್ತಿಯ ಹೆಸರನ್ನು ಬಹಿರಂಗಪಡಿಸುವುದಿಲ್ಲ. ತಂಡದ ಆಟಗಾರ್ತಿ, ನೆರವು ಸಿಬ್ಬಂದಿ ಕ್ವಾರಂಟೈನ್‌ನಲ್ಲಿದೆ. ಇನ್ನುಳಿದ ಪಂದ್ಯಗಳಲ್ಲಿಯೂ ತಂಡವು ಆಡುವುದು ಸಾಧ್ಯವಿಲ್ಲ. ಹೋದ ಬಾರಿಯ ರನ್ನರ್ಸ್ ಅಪ್ ಆಗಿರುವ ಭಾರತ ತಂಡವು ಟೂರ್ನಿಯ ಇನ್ನುಳಿದ ಪಂದ್ಯಗಳಲ್ಲಿ ಆಡುವುದಿಲ್ಲ’ ಎಂದು ಏಷ್ಯನ್ ಹಾಕಿ ಫೆಡರೇಷನ್ (ಎಎಚ್‌ಎಫ್‌) ತಿಳಿಸಿದೆ.

ಭಾರತ ತಂಡವು ಗುಂಪು ಹಂತದ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 13–0ಯಿಂದ ಜಯಿಸಿತ್ತು. ಆ ಪಂದ್ಯದಲ್ಲಿ ಗುರ್ಜಿತ್ ಕೌರ್ ಐದು ಗೋಲು ಹೊಡೆದಿದ್ದರು.

ಈ ಟೂರ್ನಿಯು 2020ರಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ ನಿಂದಾಗಿ ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT