ಮಂಗಳವಾರ, ಸೆಪ್ಟೆಂಬರ್ 28, 2021
21 °C

Tokyo Olympics | ನಾಳೆಯಿಂದ ಭಾರತದ ಪೈಲ್ವಾನರ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ: ಭಾರತದ ಕುಸ್ತಿಪಟುಗಳ ಅಭಿಯಾನ ನಾಳೆಯಿಂದ ಆರಂಭವಾಗಲಿದೆ. ಮಹಿಳೆಯರ 62 ಕೆಜಿ ವಿಭಾಗದ ಫ್ರೀಸ್ಟೈಲ್‌ನಲ್ಲಿ ಸೋನಮ್ ಮಲಿಕ್ ಮಂಗಳವಾರ ಕಣಕ್ಕಿಳಿಯಲಿದ್ದಾರೆ. 

ದೇಶದ ಏಳು ಮಂದಿ ಕುಸ್ತಿಪಟುಗಳು ಪದಕಗಳ ಬೇಟೆಗೆ ಸಜ್ಜಾಗಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲೂ ಇಷ್ಟೇ ಮಂದಿ ಅಂಗಣಕ್ಕಿಳಿದಿದ್ದರು.

ಇದನ್ನೂ ಓದಿ: 

ಕಳೆದ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳ ಸಾಧನೆ ಮಾಡಿರುವ ಬಜರಂಗ್ ಪೂನಿಯಾ (65 ಕೆಜಿ ವಿಭಾಗ) ಮತ್ತು ವಿನೇಶಾ ಪೋಗಟ್ (53 ಕೆಜಿ) ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಪುರುಷರ ವಿಭಾಗದಲ್ಲಿ ರವಿಕುಮಾರ್ ದಹಿಯಾ (57ಕೆಜಿ), ದೀಪಕ್ ಪುನಿಯಾ (86 ಕೆಜಿ) ಮತ್ತು ಮಹಿಳೆಯರ ವಿಭಾಗದಲ್ಲಿ ಅನ್ಷು ಮಲಿಕ್ ( 57 ಕೆಜಿ), ಸೀಮಾ ಬಿಸ್ಲಾ (50 ಕೆಜಿ) ಕಣದಲ್ಲಿರುವ ಇನ್ನುಳಿದ ಸ್ಪರ್ಧಿಗಳು.

ಪೈಲ್ವಾನರ ನೆರವಿಗೆ ಟೆನಿಸ್‌ ತಂಡದ ಫಿಸಿಯೊ: ಟೇಬಲ್ ಟೆನಿಸ್ ತಂಡದೊಂದಿಗೆ ತೆರಳಿದ್ದ ಫಿಸಿಯೊ ಆನಂದ್ ದುಬೆ ಅವರಿಗೆ ಕುಸ್ತಿ ತಂಡದೊಂದಿಗೆ ಕಾರ್ಯನಿರ್ವಹಿಸಲು ಭಾರತ ಒಲಿಂಪಿಕ್ಸ್ ಸಮಿತಿ (ಐಒಎ) ಮನವಿ ಮಾಡಿದೆ. ಹೀಗಾಗಿ ಭಾರತಕ್ಕೆ ಮರಳಲು ಸಜ್ಜಾಗಿದ್ದ ಅವರಿಗೆ ಟೋಕಿಯೊದಲ್ಲೇ ಉಳಿದುಕೊಂದು ಕುಸ್ತಿಪಟುಗಳಿಗೆ ನೆರವಾಗುವಂತೆ ತಿಳಿಸಲು ರಾಷ್ಟ್ರೀಯ ಟೆನಿಸ್ ಫೆಡರೇಷನ್‌ಗೆ ಐಒಎ ಕೋರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು