ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಜೂನಿಯರ್ ಕುಸ್ತಿ: ಐತಿಹಾಸಿಕ ಚಿನ್ನ ಸಾಧನೆ ಮಾಡಿದ ಅಂತಿಮ್

Last Updated 20 ಆಗಸ್ಟ್ 2022, 6:59 IST
ಅಕ್ಷರ ಗಾತ್ರ

ನವದೆಹಲಿ: ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್ ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಭಾರತದ ಅಂತಿಮ್ ಪಂಗಾಲ್, ಐತಿಹಾಸಿಕ ಚಿನ್ನ ಸಾಧನೆ ಮಾಡಿದ್ದಾರೆ.

ಈ ಮೂಲಕ ಅಂಡರ್-20 ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಫೈನಲ್‌ನಲ್ಲಿ ಕಜಕಿಸ್ತಾನದ ಅಲ್ಟಿನ್ ಶಗಾಯೆವಾ ವಿರುದ್ಧ 8-0 ಅಂತರದ ಗೆಲುವು ದಾಖಲಿಸಿದ ಅಂತಿಮ್, ಇತಿಹಾಸ ರಚಿಸಿದರು.

ಅರ್ಹತಾ ಸುತ್ತಿನಲ್ಲಿ ಜರ್ಮನಿಯ ಸ್ಪರ್ಧಿಯನ್ನು 11-0 ಅಂತರದಲ್ಲಿ ಮಣಿಸಿದ ಅಂತಿಮ್, ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಗ್ರಾಪ್ಲರ್‌ಗೆ ಆಘಾತ ನೀಡಿದರು. ಬಳಿಕ ಸೆಮಿಫೈನಲ್‌ನಲ್ಲಿ ಉಕ್ರೇನ್ ಸ್ಪರ್ಧಿಯ ವಿರುದ್ಧ ಮೇಲುಗೈ ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದರು.

ಸೋನಂ, ಪ್ರಿಯಾಂಕಾಗೆ ಬೆಳ್ಳಿ...
ಭಾರತದ ಪರ, 62 ಕೆ.ಜಿ. ವಿಭಾಗದಲ್ಲಿ ಸೋನಂ ಮತ್ತು 65 ಕೆ.ಜಿ. ವಿಭಾಗದಲ್ಲಿ ಪ್ರಿಯಾಂಕಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಹಾಗೆಯೇ 57 ಕೆ.ಜಿ. ವಿಭಾಗದಲ್ಲಿ ಸಿಟೊ ಮತ್ತು 72 ಕೆ.ಜಿ ವಿಭಾಗದಲ್ಲಿ ರಿತಿಕಾ ಕಂಚಿನ ಪದಕ ಜಯಿಸಿದರು.

ಇದನ್ನೂ ಓದಿ:

ಭಾರತ ರನ್ನರ್-ಅಪ್...
ಇದರೊಂದಿಗೆ ಭಾರತೀಯ ಜೂನಿಯರ್ ಮಹಿಳಾ ಕುಸ್ತಿ ತಂಡವು ಒಟ್ಟು 160 ಅಂಕಗಳೊಂದಿಗೆ ರನ್ನರ್-ಅಪ್ ಟ್ರೋಫಿ ಮುಡಿಗೇರಿಸಿಕೊಂಡಿತು. ಜಪಾನ್ 230 ಅಂಕಗಳೊಂದಿಗೆ ಮೊದಲನೇ ಹಾಗೂ ಅಮೆರಿಕ 124 ಅಂಕಗಳೊಂದಿಗೆ ಮೂರನೇ ಸ್ಥಾನ ಜಯಿಸಿತು.

ಅಮಿತ್ ಶಾ ಅಭಿನಂದನೆ...
ನೂತನ ಇತಿಹಾಸ ರಚಿಸಿದ ಅಂತಿಮ್ ಪಂಗಾಲ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿನಂದನೆ ಸಲ್ಲಿಸಿದ್ದಾರೆ. ನಿಮ್ಮ ಕಠಿಣ ಕರಿಶ್ರಮ ಹಾಗೂ ಬದ್ಧತೆಗೆ ಸೆಲ್ಯೂಟ್. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ. ಸದಾ ಬೆಳಗುತ್ತಿರಿ ಎಂದು ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT