ಟೋಕಿಯೊ: ಇನ್ನೆರಡು ತಿಂಗಳುಗಳ ನಂತರ ಟೋಕಿಯೊ ಮತ್ತು ಜಪಾನಿನ ಕೆಲವು ನಗರಗಳಲ್ಲಿ ಕೋವಿಡ್ ತುರ್ತು ಪರಿಸ್ಥಿತಿ ಇದ್ದರೂ ಒಲಿಂಪಿಕ್ಸ್ ಆಯೋಜಿಸಲಾಗುವುದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಪ್ರಭಾರಿ ಉಪಾಧ್ಯಕ್ಷ ಜಾನ್ ಕೋಟ್ಸ್ ತಿಳಿಸಿದ್ದಾರೆ.

ಮೂರು ದಿನಗಳ ಸಭೆಯ ನಂತರ ಆಸ್ಟ್ರೇಲಿಯಾದಿಂದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಕೋಟ್ಸ್ ಮಾತನಾಡಿದರು.

ಜಪಾನಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಿಂದಾಗಿ ಜುಲೈ 23ರಿಂದ ಆರಂಭವಾಗಬೇಕಿರುವ ಒಲಿಂಪಿಕ್ಸ್ ಮತ್ತೆ ಮುಂದೂಡುವ ಅಥವಾ ರದ್ದು ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ. ಕೆಲವು ಸ್ಥಳೀಯ ಸಂಘಟನೆಗಳು ರದ್ದುಗೊಳಿಸುವಂತೆ ಒತ್ತಾಯಿಸಿವೆ. ರದ್ದು ಮಾಡಲು ಶೇ 50–60ರಷ್ಟು ಜನಾಭಿಪ್ರಾಯವೂ ವ್ಯಕ್ತವಾಗಿದೆ. ಇದುವರೆಗೆ ಜಪಾನಿನ ಜನಸಂಖ್ಯೆಯ ಶೇ 2ರಷ್ಟು ಮಂದಿಗೆ ಮಾತ್ರ ಲಸಿಕೆ ಹಾಕಲಾಗಿದೆ.

‘ಕೂಟ ಶುರುವಾಗುವ ಹೊತ್ತಿಗೆ ಏನೇ ಸ್ಥಿತಿ ಗತಿ ಇರಲಿ. ನಾವು ನಮ್ಮ ಕಾರ್ಯಕ್ಕೆ ಸನ್ನದ್ಧರಾಗಿರಬೇಕು. ಸ್ಪರ್ಧಿಗಳೆಲ್ಲರ ಸುರಕ್ಷತೆಯನ್ನು ಕಾಪಾಡುವುದು ನಮ್ಮ ಆದ್ಯತೆಯಾಗಿರುತ್ತದೆ. ಅದರೊಂದಿಗೆ ಜಪಾನಿನ ಪ್ರಜೆಗಳ ಸುರಕ್ಷತೆಯೂ ನಮ್ಮ ಜವಾಬ್ದಾರಿ‘ ಎಂದರು.

‘ಕೂಟದಲ್ಲಿ ಶೇ 80ರಷ್ಟು ಕ್ರೀಡೆಗಳಲ್ಲಿ ಸ್ಪರ್ಧಿಗಳು ಕ್ವಾಲಿಫೈಯರ್ಗಳ ಮೂಲಕ ಬರಲಿದ್ದಾರೆ. ಉಳಿದ ಶೇ 20ರಷ್ಟು ಸ್ಪರ್ಧಿಗಳು ರ್ಯಾಂಕಿಂಗ್ ಮೂರಲಕ ಅರ್ಹತೆ ಪಡೆಯಲಿದ್ದಾರೆ‘ ಎಂದು ಕೋಟ್ಸ್ ಹೇಳಿದರು.

‘ನಾವು ತೆಗೆದುಕೊಳ್ಳಲು ಯೋಜಿಸಿರುವ ಸುರಕ್ಷತಾ ಕ್ರಮಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ), ವಿಜ್ಞಾನಗಳು ಮತ್ತು ಪರಿಣತರು ತೃಪ್ತಿದಾಯಕವೆಂದು ಹೇಳಿವೆ. ಸುರಕ್ಷಿತವಾದ ಮತ್ತು ಆರೋಗ್ಯಕರವಾದ ಕೂಟವನ್ನು ಏರ್ಪಡಿಸಲು ನಾವು ಬದ್ಧರಾಗಿದ್ದೇವೆ‘ ಎಂದು ಕೋಟ್ಸ್ ತಿಳಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಹೋದ ವರ್ಷ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಈ ವರ್ಷಕ್ಕೆ ಮುಂದೂಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.