ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ನಡುವೆ ಕೋವಿಡ್‌ ಆತಂಕ- ನಗುವಿಗೆ 30 ಸೆಕೆಂಡ್‌!

Last Updated 25 ಜುಲೈ 2021, 19:30 IST
ಅಕ್ಷರ ಗಾತ್ರ

ಟೋಕಿಯೊ: ಕ್ರೀಡಾಸ್ಫೂರ್ತಿ ಮತ್ತು ಸಂಭ್ರಮದ ನಡುವೆಯೂ ಟೋಕಿಯೊದಲ್ಲಿ ಕೋವಿಡ್ ಸೋಂಕಿನ ಆತಂಕ ಮುಂದುವರಿದಿದೆ. ಇಬ್ಬರು ‘ಚಾಂಪಿಯನ್’ ಆಟಗಾರರು ಸೋಂಕಿನಿಂದಾಗಿ ಕಣಕ್ಕೆ ಇಳಿಯದೇ ಇರಲು ನಿರ್ಧರಿಸಿರುವುದರಿಂದ ಒಲಿಂಪಿಕ್ಸ್ ಗಾಲ್ಫ್ ಸ್ಪರ್ಧೆಗೆ ಮಂಕು ಕವಿದಿದೆ.

ಒಲಿಂಪಿಕ್ಸ್ ಆಯೋಜನೆಯ ಬಗ್ಗೆ ಚರ್ಚಿಸಲು ಮತ್ತು ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಪರಿಶೀಲನೆಗಾಗಿ ಜಪಾನ್ ಪ್ರಧಾನಮಂತ್ರಿ ಯೊಶಿಹಿಡೆ ಸುಗಾ ಮತ್ತು ಟೋಕಿಯೊ ಗವರ್ನರ್ ಯುರಿಕೊ ಕೊಯ್ಕೆ ಭಾನುವಾರ ಮಾತುಕತೆ ನಡೆಸಿದರು.

ಭಾನುವಾರ ಟೋಕಿಯೊದಲ್ಲಿ 1,763 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಇವರಿಬ್ಬರ ಭೇಟಿ ಮಹತ್ವ ಗಳಿಸಿದೆ. ಒಲಿಂಪಿಕ್ಸ್‌ ನಡೆಯುತ್ತಿರುವ ಸ್ಥಳದಲ್ಲೇ ಸೋಂಕಿನ 10 ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ಕ್ರೀಡಾಪಟುಗಳು, ಆರು ಮಂದಿ ಅಧಿಕಾರಿಗಳು, ಮಾಧ್ಯಮ ಕಾರ್ಯಕರ್ತ ಮತ್ತು ಗುತ್ತಿಗೆದಾರನಿಗೆ ಸೋಂಕು ದೃಢವಾಗಿದೆ ಎಂದು ಆಯೋಜಕರು ವಿವರಿಸಿದ್ದಾರೆ.

ಜಾನ್ ರಾಹಮ್‌, ಬ್ರೈಸನ್ ಅಲಭ್ಯ

ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಸ್ಪೇನ್‌ನ ಜಾನ್ ರಾಹಮ್ ಮತ್ತು ಕಳೆದ ಬಾರಿಯ ಅಮೆರಿಕ ಓಪನ್ ಚಾಂಪಿಯನ್ ಬ್ರೈಸನ್ ಡಿ ಚಾಂಬಿಯೊ ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿದ್ದಾರೆ.ಬ್ರೈಸನ್ ಬದಲಿಗೆ ಪ್ಯಾಟ್ರಿಕ್ ರೀಡ್ ಕಣಕ್ಕೆ ಇಳಿಯಲಿದ್ದಾರೆ ಎಂದು ಪಿಜಿಎ ಘೋಷಿಸಿದೆ. ರಾಹಮ್ ಅವರು ಗಾಲ್ಫ್ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪ್ಯಾನಿಷ್ ಒಲಿಂಪಿಕ್ ಸಮಿತಿ ತಿಳಿಸಿದೆ.

ನಗುವಿಗೆ 30 ಸೆಕೆಂಡ್‌!

ಪದಕ ಗೆಲ್ಲುವ ಕ್ರೀಡಾಪಟುಗಳು ಫೋಟೊಗ್ರಫಿ ಸಂದರ್ಭದಲ್ಲಿ 20 ಸೆಕೆಂಡುಗಳ ಕಾಲ ಮಾಸ್ಕ್‌ ತೆಗೆಯಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅವಕಾಶ ನೀಡಿದೆ.

ಕ್ರೀಡಾಪಟುಗಳು, ಕೋಚ್‌ಗಳು ಮತ್ತು ಅಧಿಕಾರಿಗಳು ಎಲ್ಲ ಸಂದರ್ಭದಲ್ಲೂ ಮಾಸ್ಕ್‌ ಧರಿಸಬೇಕು ಎಂದು ಆಯೋಜಕರು ತಿಳಿಸಿದ್ದರು. ಕೋವಿಡ್‌ಗೆ ಸಂಬಂಧಿಸಿದ ಪರಿಷ್ಕೃತ ನಿಯಮಗಳನ್ನು ಭಾನುವಾರ ಜಾರಿಗೆ ತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT