ಭಾನುವಾರ, ಸೆಪ್ಟೆಂಬರ್ 26, 2021
21 °C

ಕೆ–1000 ರ‍್ಯಾಲಿ: ಗೌರವ್‌ ಗಿಲ್‌ ಮು‌ನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮೋಘ ಚಾಲನಾ ಕೌಶಲ ಪ್ರದರ್ಶಿಸಿದ ಅನುಭವಿ ಗೌರವ್ ಗಿಲ್‌, ಎಫ್‌ಎಂಎಸ್‌ಸಿಐ ಭಾರತ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಶನಿವಾರ ಮುನ್ನಡೆ ಸಾಧಿಸಿದ್ದಾರೆ. 

ಜೆ.ಕೆ.ಟೈರ್ಸ್‌ ಮೋಟರ್‌ಸ್ಪೋರ್ಟ್ಸ್‌ ತಂಡದ ಚಾಲಕರಾದ ಗಿಲ್‌ (ಸಹ ಚಾಲಕ ಮೂಸಾ ಶರೀಫ್‌), ವೇಗಕ್ಕಿಂತ ಹೆಚ್ಚಾಗಿ ನೈಪುಣ್ಯ ಮತ್ತು ನಿಯಂತ್ರಣದೊಡನೆ ಮುನ್ನಡೆ ಸಾಧಿಸಿದರು. 50 ಚಾಲಕರು ಕಣದಲ್ಲಿದ್ದಾರೆ. 

ಅರ್ಕ ಮೋಟರ್‌ಸ್ಫೋರ್ಟ್ಸ್‌ನ ಕರ್ಣ ಕಡೂರ್‌ (ಸಹ ಚಾಲಕ ನಿಖಿಲ್‌ ಪೈ), ಎರಡು ನಿರಾಶಾದಾಯಕ ಸುತ್ತುಗಳ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಅವರು ನಾಲ್ಕನೇ ಹಂತವನ್ನು 12ನಿ.24 ಸೆ.ಗಳಲ್ಲಿ ಪೂರೈಸಿ ಗಮನ ಸೆಳೆದರು.

ಡೀನ್‌ ಮಸ್ಕರೇನಾಸ್‌ (ಶುಪ್ತ ಪಡಿವೆಲ್‌ ಜೊತೆ) ನಂತರದ ಸ್ಥಾನದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು