ಸೋಮವಾರ, ಜನವರಿ 27, 2020
15 °C
ಇಂದಿನಿಂದ ಮೂರು ರಾಷ್ಟ್ರಗಳ ಜೂನಿಯರ್‌ ಮಹಿಳಾ ಹಾಕಿ ಟೂರ್ನಿ

ಭಾರತಕ್ಕೆ ನ್ಯೂಜಿಲೆಂಡ್‌ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

ಕೆನ್‌ಬೆರ್ರಾ, ಆಸ್ಟ್ರೇಲಿಯಾ: ಮೂರು ರಾಷ್ಟ್ರಗಳ ಜೂನಿಯರ್‌ ಮಹಿಳಾ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ಬುಧವಾರ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿರುವ ಭಾರತ ಶುಭಾರಂಭದ ನಿರೀಕ್ಷೆಯಲ್ಲಿದೆ.

ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಇನ್ನೊಂದು ತಂಡ ಆಸ್ಟ್ರೇಲಿಯಾ. ವಿಶ್ವದ ಎರಡು ಬಲಿಷ್ಠ ತಂಡಗಳ ಎದುರು ಸಾಮರ್ಥ್ಯ ಅನಾವರಣಕ್ಕೆ ಈ ಟೂರ್ನಿ ಭಾರತಕ್ಕೆ ಉತ್ತಮ ವೇದಿಕೆಯಾಗಲಿದೆ.

ಮುಂದಿನ ವರ್ಷ ಜಪಾನ್‌ನಲ್ಲಿ ಎಎಚ್‌ಎಫ್‌ ಜೂನಿಯರ್‌ ಮಹಿಳಾ ಏಷ್ಯಾಕಪ್‌ ಟೂರ್ನಿ ನಡೆಯಲಿದೆ. ಹಾಗಾಗಿ ಈ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರುವ ನಿರೀಕ್ಷೆ ತಂಡದ ಕೋಚ್‌ ಬಲ್ಜಿತ್‌ ಅವರದ್ದು.

ಡಿಸೆಂಬರ್‌ 5ರಂದು ಆಸ್ಟ್ರೇಲಿಯಾ ಎದುರು ಆಡಲಿರುವ ಭಾರತ, 7ರಂದು ನ್ಯೂಜಿಲೆಂಡ್‌ ಮತ್ತೆ 8ರಂದು ಆಸ್ಟ್ರೇಲಿಯಾ ಎದುರು ಕಣಕ್ಕಿಳಿಯಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು