ಭುವನೇಶ್ವರ: ‘ಹಾಲಿ ಚಾಂಪಿಯನ್’ ಕೂಡ ಆಗಿರುವ ಆತಿಥೇಯ ಭಾರತ ತಂಡವು ಶುಕ್ರವಾರ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಸೆಮಿಫೈನಲ್ ಸೋತು ಹೊರಬಿದ್ದಿತು.

ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು 2–4ರಿಂದ ಜರ್ಮನಿ ಎದುರು ಸೋತಿತು. ಇದರಿಂದಾಗಿ ಸತತ ಎರಡನೇ ಸಲ ಪ್ರಶಸ್ತಿ ಜಯಿಸುವ ಭಾರತ ತಂಡದ ಕನಸು ಕಮರಿತು.

ಆರಂಭದಿಂದಲೇ ಆಕ್ರಮಣಕಾರಿ ಶೈಲಿ ಆಟವಾಡಿದ ಜರ್ಮನಿ ಕೊನೆಯವರೆಗೂ ಪ್ರಾಬಲ್ಯ ಸಾದಿಸಿತು.

15ನೇ ನಿಮಿಷದಲ್ಲಿ ಕ್ಲೆನ್ಲೆನ್ ಎರಿಕ್ ಗೋಲು ಹೊಡೆದು ತಂಡದ ಖಾತೆ ತೆರೆದರು. ಆರು ನಿಮಿಷಗಳ ನಂತರ ಫಿಲಿಪ್ ಹಾಲ್ಜ್‌ಮುಲ್ಲರ್ (21ನೇ ನಿ), ಹೆನೆಸ್ ಮುಲ್ಲರ್ (24ನೇ ನಿ) ಅವರು ಫೀಲ್ಡ್‌ಗೋಲ್‌ಗಳನ್ನು ಹೊಡೆದರು. 25ನೇ ನಿಮಿಷದಲ್ಲಿ ಕ್ರಿಸ್ಟೋಫರ್ ಕಟರ್ ಪೆನಾಲ್ಪಿ ಕಾರ್ನರ್ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದರು.

ಭಾರತದ ಸುದೀಪ್ ಚಿರ್ಮಾಕೊ (25ನೇ ನಿ) ಮತ್ತು ಬಾಬಿ ಸಿಂಗ್ ಧಾಮಿ (60ನೇ ನಿ) ತಲಾ ಒಂದು ಗೋಲು ಹೊಡೆದು ಸೋಲಿನ ಅಂತರ ಕಡಿಮೆಗೊಳಿಸಿದರು.

ಮೊದಲ ಸೆಮಿಫೈನಲ್‌ನಲ್ಲಿ ಫ್ರಾನ್ಸ್ –ಅರ್ಜೆಂಟೀನಾ

ರೋಚಕ ಶೂಟೌಟ್‌ನಲ್ಲಿ ಬೆಲ್ಜಿಯಂ ತಂಡ ಸ್ಪೇನ್ ವಿರುದ್ಧ ಗೆಲುವು ಸಾಧಿಸಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಎರಡು ಗೋಲು ಗಳಿಸಿದ್ದವು. ನಾಲ್ಕನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಕುನಿಲ್ ಪಾವು ಅವರು ಗೋಲು ಗಳಿಸಿ ಸ್ಪೇನ್‌ಗೆ ಮುನ್ನಡೆ ತಂದುಕೊಟ್ಟರು. 24ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್‌ನಲ್ಲೂ ಕುನಿಲ್ ಚೆಂಡನ್ನು ಗುರಿ ಮುಟ್ಟಿಸಿದರು.

ದ್ವಿತೀಯಾರ್ಧದಲ್ಲಿ ಬೆಲ್ಜಿಯಂ ತಿರುಗೇಟು ನೀಡಿತು. 33ನೇ ನಿಮಿಷದಲ್ಲಿ ಜೆರೆಮಿ ವಿಲ್ಬರ್ಸ್ ಮತ್ತು 56ನೇ ನಿಮಿಷದಲ್ಲಿ ತಿಬಿಯು ಸ್ಟಾಕ್‌ಬರೆಕ್ಸ್ ಅವರು ಸೊಗಸಾದ ಫೀಲ್ಡ್ ಗೋಲುಗಳ ಮೂಲಕ ಸಮಬಲ ಗಳಿಸಿಕೊಟ್ಟರು.

ಶೂಟೌಟ್‌ನಲ್ಲಿ ಬಿಯು ಸ್ಟಾಕ್‌ಬರೆಕ್ಸ್, ಜೆರೆಮಿ ವಿಲ್ಬರ್ಸ್, ತೊಬಿಯಾಸ್ ಬಿಕೆನ್ಸ್ ಮತ್ತು ರೋಮನ್ ಡುವೆಕಾಟ್ ಅವರು ಬೆಲ್ಜಿಯಂ ಪರವಾಗಿ ಯಶಸ್ಸು ಸಾಧಿಸಿದರು. ಸ್ಪೇನ್‌ನ ರಫೆಲ್ ವಿಲೋಂಗ, ಇಗ್ನೇಷಿಯೊ ಅಬಾಜೊ ಮತ್ತು ಜೆರಾರ್ಡ್ ಕ್ಲೇಪ್ಸ್ ಚೆಂಡನ್ನು ಗುರಿ ಸೇರಿಸಿದರೆ ಬೋರ್ಜಾ ಲಕಾಲಿ ಮೊದಲ ಅವಕಾಶದಲ್ಲೂ ಮ್ಯಾನ್ಯುಯೆಲ್ ರಾಡ್ರಿಗಸ್ ಕೊನೆಯ ಅವಕಾಶದಲ್ಲೂ ವೈಫಲ್ಯ ಕಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.