ಮಂಗಳವಾರ, ಸೆಪ್ಟೆಂಬರ್ 21, 2021
21 °C

ವಿಷ್ಣು ಜೊತೆ ಜ್ವಾಲಾ ಗುಟ್ಟ ನಿಶ್ಚಿತಾರ್ಥ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟ ಅವರ ನಿಶ್ಚಿತಾರ್ಥ ತಮಿಳು ನಟ ಮತ್ತು ನಿರ್ಮಾಪಕ ವಿಷ್ಣು ವಿಶಾಲ್ ಜೊತೆ ಭಾನುವಾರ ನಡೆದಿದೆ. ಈ ವಿಷಯವನ್ನು ಜ್ವಾಲಾ, ಸೋಮವಾರ ಬಹಿರಂಗಪಡಿಸಿದ್ದಾರೆ.

37ನೇ ಜನ್ಮದಿನದ ಸಂತಸವನ್ನು ಟ್ವಿಟರ್ ಮೂಲಕ ಹಂಚಿಕೊಂಡಿರುವ ಜ್ವಾಲಾ ಗುಟ್ಟ ಅವರು ವಿಷ್ಣು ವಿಶಾಲ್ ಜೊತೆ ಇರುವ ಚಿತ್ರವನ್ನು ಪೋಸ್ಟ್ ಮಾಡಿದ್ದು ’ಈ ಅಚ್ಚರಿ ನಿನ್ನೆಯ ದಿನ ನಡೆಯಿತು. ಎರಡು ದಿನಗಳಿಂದ ನಾನು ಅನುಭವಿಸಿದ ಸಂಭ್ರಮಕ್ಕೆ ಮೇರೆ ಇಲ್ಲ. ಬದುಕಿನ ಸುಂದರ ಪಯಣದಲ್ಲಿ ಈ ಸಂದರ್ಭ ವಿಶಿಷ್ಟ‘ ಎಂದು ಬರೆದಿದ್ದಾರೆ.

ಕ್ರಿಕೆಟ್ ಆಟಗಾರನೂ ಆಗಿರುವ ವಿಷ್ಣು ವಿಶಾಲ್ ತಮಿಳುನಾಡು ಕ್ರಿಕೆಟ್‌ ಸಂಸ್ಥೆಯ ಕೆಲವು ಲೀಗ್‌ಗಳಲ್ಲಿ ಆಡಿದ್ದಾರೆ. ಆದರೆ ಕಾಲಿಗೆ ಗಾಯವಾದ ಕಾರಣ ಅವರ ಕ್ರಿಕೆಟ್ ಜೀವನಕ್ಕೆ ತೆರೆ ಬಿದ್ದಿತ್ತು. ನಂತರ ಬೆಳ್ಳಿತೆರೆ ಮೇಲೆ ಮಿಂಚಿದ ಅವರು ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ.

ಜ್ವಾಲಾ ಗುಟ್ಟ ಈ ಹಿಂದೆ ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಅವರನ್ನು ಮದುವೆಯಾಗಿದ್ದರು. ವಿಶಾಲ್ ಕೂಡ ವಿವಾಹಿತರಾಗಿದ್ದು ಒಬ್ಬ ಮಗ ಇದ್ದಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು