ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಎರಡನೇ ಮಿನಿ ಒಲಿಂಪಿಕ್ಸ್: ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ಚಾಲನೆ

ಕರ್ನಾಟಕದ ಎರಡನೇ ಮಿನಿ ಒಲಿಂಪಿಕ್ಸ್: ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ
Last Updated 15 ಮೇ 2022, 13:08 IST
ಅಕ್ಷರ ಗಾತ್ರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೋಮವಾರದಿಂದ ಬಾಲ ಅಥ್ಲೀಟ್‌ಗಳ ಕಲರವ ಮೊಳಗಲಿದೆ. ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಜಂಟಿಯಾಗಿ ಆಯೋಜಿಸುತ್ತಿರುವ ಎರಡನೇ ಮಿನಿ ಒಲಿಂಪಿಕ್ಸ್ ಆರಂಭವಾಗಲಿದೆ.

14 ವರ್ಷದೊಳಗಿನವರ ಈ ಕೂಟಕ್ಕೆ ಸೋಮವಾರ ಸಂಜೆಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಚಾಲನೆ ದೊರೆಯಲಿದೆ. ಇದೇ 22ರವರೆಗೆ ಕೂಟ ನಡೆಯಲಿದೆ.

2020ರ ಫೆಬ್ರುವರಿಯಲ್ಲಿ ಮೊದಲ ಮಿನಿ ಒಲಿಂಪಿಕ್ಸ್ ರಾಜ್ಯದಲ್ಲಿ ನಡೆದಿತ್ತು.

ಮಿನಿಒಲಿಂಪಿಕ್‌ ಕೂಟದಲ್ಲಿ ಅಥ್ಲೆಟಿಕ್ಸ್, ಆರ್ಚರಿ, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್‌ಬಾಲ್, ಜಿಮ್ನಾಸ್ಟಿಕ್ಸ್, ಹ್ಯಾಂಡ್‌ಬಾಲ್, ಹಾಕಿ, ಜುಡೊ, ಕೊಕ್ಕೊ, ಟೆನಿಸ್, ನೆಟ್‌ಬಾಲ್‌, ರೈಫಲ್ ಶೂಟಿಂಗ್, ಈಜು, ಟೇಬಲ್ ಟೆನಿಸ್, ಟೆಕ್ವಾಂಡೊ, ವೇಟ್‌ಲಿಫ್ಟಿಂಗ್, ವುಷು ನಡೆಯಲಿವೆ.

ಕಂಠೀರವ ಕ್ರೀಡಾಂಗಣ, ವಿದ್ಯಾನಗರದಲ್ಲಿ ಕ್ರೀಡಾಶಾಲೆಯ ಮೈದಾನ, ಭಾರತ ಕ್ರೀಡಾ ಪ್ರಾಧಿಕಾರದ ಶೂಟಿಂಗ್ ರೇಂಜ್ , ರಾಜ್ಯ ಫುಟ್‌ಬಾಲ್‌ ಸಂಸ್ಥೆ ಕ್ರೀಡಾಂಗಣ, ಹೂಡಿ ಗೋಪಾಲನ್ ಸ್ಪೋರ್ಟ್ಸ್ ಸೆಂಟರ್, ಬಸವನಗುಡಿ ಈಜು ಕೇಂದ್ರ ಮತ್ತು ಶಾಂತಿನಗರದ ಹಾಕಿ ಕ್ರೀಡಾಂಗಣದಲ್ಲಿ ವಿವಿಧ ಸ್ಪರ್ಧೆಗಳು ಆಯೋಜನೆಯಾಗಿವೆ.

ಪ್ರತಿ ಜಿಲ್ಲೆಯಿಂದ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಎಂಟು ತಂಡಗಳು ಅಥವಾ ಎಂಟು ಮಂದಿ ಪಾಲ್ಗೊಳ್ಳಲು ಅವಕಾಶವಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ವಿವಿಧ ಟೂರ್ನಿ ಮತ್ತು ಕ್ರೀಡಾಕೂಟಗಳಲ್ಲಿ ಪಾಲ್ಗೊಂಡವರೂ ಇಲ್ಲಿಗೆ ಬಂದಿರುವುದರಿಂದ ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ.

ಕೂಟದ ಮೊದಲ ದಿನವಾದ ಸೋಮವಾರ ಆರ್ಚರಿ, ಬಾಕ್ಸಿಂಗ್‌, ಹಾಕಿ, ಲಾನ್ ಟೆನಿಸ್‌, ನೆಟ್‌ಬಾಲ್, ಟೇಬಲ್ ಟೆನಿಸ್ ಮತ್ತು ವುಷು ಸ್ಪರ್ಧೆಗಳು ನಿಗದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT