ಬೆಂಗಳೂರು: ಬರ್ಮಿಂಗ್‌ಹ್ಯಾಮ್‌ನಲ್ಲಿ ಈಚೆಗೆ ಮುಗಿದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಮರಳಿರುವ ಶ್ರೀಹರಿ ನಟರಾಜ್ ಶುಕ್ರವಾರ ಇಲ್ಲಿ ಆರಂಭವಾದ ರಾಜ್ಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದರು. ಜೊತೆಗೆ ತಮ್ಮದೇ ಹಳೆಯ ದಾಖಲೆಯನ್ನೂ ಉತ್ತಮಪಡಿಸಿಕೊಂಡರು.
ಕರ್ನಾಟಕ ಈಜು ಸಂಸ್ಥೆಯ ಆಶ್ರಯದಲ್ಲಿಪಡುಕೋಣೆ–ದ್ರಾವಿಡ್ ಕ್ರೀಡಾ ಉತ್ಕೃಷ್ಟತಾ ಕೇಂದ್ರದಲ್ಲಿ ಆಯೋಜಿಸಲಾಗಿರುವ ರಾಜ್ಯ ಸೀನಿಯರ್ ಈಜು ಚಾಂಪಿಯನ್‌ಷಿಪ್ ಮೊದಲ ದಿನವಾದ ಶುಕ್ರವಾರ ಪುರುಷರ 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಮೊದಲ ಸ್ಥಾನ ಪಡೆದರು.
ಬಸವನಗುಡಿ ಈಜುಕೇಂದ್ರದ ಅನೀಷ್ ಗೌಡಎರಡು ಚಿನ್ನ ಗೆದ್ದರು. ಪುರುಷರ 800 ಮೀ ಫ್ರೀಸ್ಟೈಲ್‌ನಲ್ಲಿ ಅವರು ನೂತನ ಕೂಟ ದಾಖಲೆ (8ನಿ,24.97ಸೆ) ಬರೆದರು. ಅವರು 200 ಮೀ ಫ್ರೀಸ್ಟೈಲ್ ವಿಭಾಗದಲ್ಲಿಯೂ ಚಿನ್ನದ ಪದಕ ಜಯಿಸಿದರು.
ಮಹಿಳೆಯರ 50 ಮೀಟರ್ಸ್ ಬಟರ್‌ಫ್ಲೈ ವಿಭಾಗದಲ್ಲಿ ಡಾಲ್ಫಿನ್ ಕ್ಲಬ್‌ನ ನೀನಾ ವೆಂಕಟೇಶ್ ನೂತನ ಕೂಟ ದಾಖಲೆ (28.59ಸೆ)ಯೊಂದಿಗೆ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.
ಫಲಿತಾಂಶಗಳು
ಪುರುಷರ ವಿಭಾಗ
50 ಮೀ ಬಟರ್‌ಫ್ಲೈ: ಎಂ.ಪೃಥ್ವಿ (ಬಸವನಗುಡಿ; 25.62ಸೆ)–1, ಆರ್. ಸಂಭವ್ (ಡಾಲ್ಫಿನ್)–2, ನಯನ್ ವಿಘ್ನೇಷ್ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–3.
100 ಮೀ ಬ್ರೆಸ್ಟ್‌ಸ್ಟ್ರೋಕ್: ವಿದಿತ್ ಎಸ್ ಶಂಕರ್ (ಡಾಲ್ಫಿನ್; 1ನಿ,08.61ಸೆ;)–1, ಕಲ್ಪ್ ಎಸ್ ಬೊಹ್ರಾ (ಬಸವನಗುಡಿ)–2, ಡಿ.ಎಸ್. ಪೃಥ್ವಿಕ್ (ಬಸವನಗುಡಿ)–3.
200 ಮೀ ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್ (ಡಾಲ್ಫಿನ್; ದಾಖಲೆ: 2ನಿ,04.08ಸೆ)–1, ಎಸ್. ಶಿವಾ (ಬಸವನಗುಡಿ)–2, ಉತ್ಕರ್ಷ್ ಸಂತೋಷ್ ಪಾಟೀಲ (ಬಸವನಗುಡಿ)–3.
200 ಮೀ ಫ್ರೀಸ್ಟೈಲ್: ಅನೀಶ್ ಗೌಡ (ಬಸವನಗುಡಿ; 1ನಿ,53.30ಸೆ)–1, ಆರ್. ಸಂಭವ (ಡಾಲ್ಫಿನ್)–2, ಶಿವಾಂಕ್ ವಿಶ್ವನಾಥ್ (ಗಾಫ್ರೆ)–3.
400 ಮೀ ಮೆಡ್ಲೆ: ಎಸ್. ಶಿವಾ (ಬಸವನಗುಡಿ; ದಾಖಲೆ–4ನಿ,33.77ಸೆ)–1, ಅನೀಶ್ ಎಸ್ ಗೌಡ (ಬಸವನಗುಡಿ)–2, ಕಲ್ಪ್ ಬೊಹ್ರಾ (ಬಸವನಗುಡಿ)–3.
800 ಮೀ ಫ್ರೀಸ್ಟೈಲ್: ಅನೀಶ್ ಎಸ್ ಗೌಡ (ಬಸವನಗುಡಿ; ನೂತನ ದಾಖಲೆ 8ನಿ,24.97ಸೆ. ಹಳೆಯದು: ಎ.ಪಿ. ಗಗನ್ 8ನಿ,26.03ಸೆ) –1, ಶಿವಾಂಕ್ ವಿಶ್ವಾನಾಥ್ (ಗಾಫ್ರೆ ಸ್ವಿಮಿಂಗ್ ಪ್ರೊಗ್ರಾಂ)–2, ಧ್ಯಾನ್ ಬಾಲಕೃಷ್ಣ (ಬಸವನಗುಡಿ)–3.
4X100 ಮೀ ಫ್ರೀಸ್ಟೈಲ್: ಬಸವನಗುಡಿ ಎ (ಉತ್ಕರ್ಷ್ ಸಂತೋಷ ಪಾಟೀಲ, ರಾಜವಿನಾಯಕ ರೆಲೆಕರ್, ಎಸ್. ಶಿವಾ, ಅನೀಷ್ ಗೌಡ; 3ನಿ,32.65ಸೆ)–1, ಡಾಲ್ಫಿನ್ (ಆರ್. ಸಂಭವ್, ರಿಷಭ್ ಸಿಂಗ್ ದಡ್ವಾಲ್, ಕಾರ್ತಿಕೆಯನ್ ನಾಯರ್, ಶ್ರೀಹರಿ ನಟರಾಜ್)–2, ಬಸವನಗುಡಿ ಬಿ (ಧ್ಯಾನ್ ಬಾಲಕೃಷ್ಣ, ಪವನ್ ಧನಂಜಯ, ಎಸ್. ವಿಶ್ವನಾಥನ್, ಅನಿರುದ್ಧ ಮುರಳಿ)–3.
4X200 ಮೀ ಫ್ರಿಸ್ಟೈಲ್: ಬಸವನಗುಡಿ ಎ (ಧ್ಯಾನ್ ಬಾಲಕೃಷ್ಣ, ಪವನ್ ಧನಂಜಯ, ಎಸ್. ಶಿವಾ, ಅನೀಶ್ ಎಸ್ ಗೌಡ ; 7ನಿ,56.33ಸೆ)–1, ಡಾಲ್ಫಿನ್ (ಕಾರ್ತಿಕೆಯನ್ ನಾಯರ್, ರಿಷಭ್ ಸಿಂಗ್ ದಡ್ವಾಲ್, ಆರ್. ಸಂಭವ್, ಶ್ರೀಹರಿ ನಟರಾಜ್)–2, ಬಸವನಗುಡಿ ಬಿ (ಕಲ್ಪ್ ಬೊಹ್ರಾ, ಎಸ್. ಧಕ್ಷನ್, ಮನೋಜ್ ಬಿ ನಾಯಕ, ಜಿ. ವರುಣಗೌಡ)–3.
ಮಹಿಳೆಯರ ವಿಭಾಗ
50 ಮೀ ಬಟರ್‌ಫ್ಲೈ: ನೀನಾ ವೆಂಕಟೇಶ್ (ಡಾಲ್ಫಿನ್; ದಾಖಲೆ–28.59ಸೆ)–1, ತನಿಷಿ ಗುಪ್ತಾ (ಡಾಲ್ಫಿನ್)–2, ಎ. ಜೆಡಿಡಾ (ಡಿಕೆವಿ)–3.
100 ಮೀ ಬ್ರೆಸ್ಟ್‌ಸ್ಟ್ರೋಕ್: ಮಾನವಿ ವರ್ಮಾ (ಡಾಲ್ಫಿನ್; ನೂತನ ದಾಖಲೆ: 1ನಿ,16.73ಸೆ. )–1, ವಿನಿತಾ ನಯನಾ –2, ಎಸ್. ಲಕ್ಷ್ಯ –3 (ಇಬ್ಬರೂ ಬಸವನಗುಡಿ).
200 ಮೀ ಬ್ಯಾಕ್‌ಸ್ಟ್ರೋಕ್: ರಿಧಿಮಾ ವೀರೇಂದ್ರಕುಮಾರ್ (ಬಸವನಗುಡಿ; ದಾಖಲೆ: 2ನಿ,24.54ಸೆ)–1, ಶಾಲಿನಿ ಆರ್ ದೀಕ್ಷಿತ್ (ಡಾಲ್ಫಿನ್)–2, ರಿತು ಭರಮರೆಡ್ಡಿ (ಬಸವನಗುಡಿ)–3.
200 ಮೀ ಫ್ರೀಸ್ಟೈಲ್: ದಿನಿಧಿ ದೇಶಿಂಗು (2ನಿ,11.96ಸೆ)–1, ಶಾಲಿನಿ ದೀಕ್ಷಿತ್ –2, ಎಸ್. ಋಜುಲಾ –3 (ಎಲ್ಲರೂ ಡಾಲ್ಫಿನ್ ಕೆಂದ್ರದವರು).
400 ಮೀ ಮೆಡ್ಲೆ: ಎ. ಜೆಡಿದಾ (ಡಿಕೆವಿ ಈಜುಕೇಂದ್ರ; ದಾಖಲೆ: 5ನಿ,18.76ಸೆ)–1, ಎಸ್. ಲಕ್ಷ್ಯ (ಬಸವನಗುಡಿ)–2, ಶಿರಿನ್ (ಬಸವನಗುಡಿ)–3
800 ಮೀ ಫ್ರೀಸ್ಟೈಲ್: ಅಶ್ಮಿತಾ ಚಂದ್ರಾ (ಗಾಫ್ರೆ ಎಸ್‌ಪಿ;9ನಿ,34.89ಸೆ.)–1, ಶಿರಿನ್ (ಬಸವನಗುಡಿ)–2, ಎಸ್. ಋಜುಲಾ (ಡಾಲ್ಫಿನ್)–3
4X100 ಮೀ ಫ್ರೀಸ್ಟೈಲ್: ಡಾಲ್ಫಿನ್ (ಸುವನಾ ಭಾಸ್ಕರ್, ಶಾಲಿನಿ ದೀಕ್ಷಿತ್, ಎಸ್. ಋಜುಲಾ, ನೀನಾ ವೆಂಕಟೇಶ್; 4ನಿ,6.94ಸೆ)–1, ಡಾಲ್ಫಿನ್ (ತನಿಷಿ ಗುಪ್ತಾ, ಮಾನವಿ ವರ್ಮಾ, ಅರುಷಿ ಅಗರವಾಲ್, ಹಷಿಕಾ ರಾಮಚಂದ್ರ)–2, ಬಸವನಗುಡಿ ಎ (ಶಿರಿನ್, ನೈಶಾ, ವಿನಿತಾ ನಯನ, ರಿದಿಮಾ ವೀರೇಂದ್ರ ಕುಮಾರ್)–3
4X200 ಮೀ ಫ್ರೀಸ್ಟೈಲ್: ಡಾಲ್ಫಿನ್1 (ಸುವನಾ ಭಾಸ್ಕರ್, ಶಾಲಿನಿ ದೀಕ್ಷಿತ್, ಎಸ್. ಋಜುಲಾ, ದಿನಿಧಿ ದೇಶಿಂಗು; 9ನಿ,9.25ಸೆ)–1, ಡಾಲ್ಫಿನ್2 (ತನಿಷಿ ಗುಪ್ತಾ, ಆರುಷಿ ಅಗರವಾಲ್, ಸಬಾ ಸುಹಾನಾ, ಹಷಿಕಾ ರಾಮಚಂದ್ರ)–2, ಬಸವನಗುಡಿ ಎ (ಅನುಮತಿ ಚೌಗುಲೆ, ನೈಷಾ, ವಿಹಿತಾ ನಯನಾ, ಶಿರಿನ್)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.