ಮಂಗಳವಾರ, ಸೆಪ್ಟೆಂಬರ್ 22, 2020
26 °C
ಕೆನಡಾ ಓ‍ಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ ಸೌರಭ್‌ ವರ್ಮಾ

ಬ್ಯಾಡ್ಮಿಂಟನ್‌: ಪರುಪಳ್ಳಿ ಕಶ್ಯಪ್‌ ಸೆಮಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ಯಾಲ್ಗರಿ, ಕೆನಡಾ: ದಿಟ್ಟ ಪ್ರದರ್ಶನ ತೋರಿದ ಪರುಪಳ್ಳಿ ಕಶ್ಯಪ್‌ ಶನಿವಾರ ಕೆನಡಾ ಓಪನ್‌ ಸೂಪರ್‌ 100 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್‌ ತಲುಪಿದರು. ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್ ಲೂಕಾಸ್‌ ಕ್ಲಾರ್‌ಬೌಟ್‌ ಅವರನ್ನು 12–21, 23–21, 24–22 ಗೇಮ್‌ಗಳಿಂದ ಮಣಿಸಿದರು.

ಫ್ರೆಂಚ್‌ ಆಟಗಾರ ಲೂಕಾಸ್‌ ಆರಂಭದ ಗೇಮ್‌ನಲ್ಲಿ 5–2 ಮುನ್ನಡೆ ಗಳಿಸಿದರು. ಬಳಿಕ ಒಂದು ಹಂತದಲ್ಲಿ 9–10ರಿಂದ ಕಶ್ಯಪ್‌ ಮುನ್ನಡೆಗೆ ಸಮೀಪದಲ್ಲಿದ್ದರೂ, ಲೂಕಾಸ್‌ ಗೇಮ್‌ ಬಿಟ್ಟುಕೊಡಲಿಲ್ಲ. ಎರಡನೇ ಗೇಮ್‌ನಲ್ಲಿ ಭಾರತದ ಆಟಗಾರನಿಗೆ ಆರಂಭದಲ್ಲಿ 8–4 ಮುನ್ನಡೆ ದೊರಕಿತು.  ವಿರಾಮ ವೇಳೆ ಲೂಕಾಸ್‌ 11–10ರಿಂದ ಅಲ್ಪ ಮುನ್ನಡೆ ಪಡೆದರೂ ಕಶ್ಯಪ್‌ ಗೇಮ್‌ ಗೆದ್ದುಕೊಂಡರು.

ನಿರ್ಣಾಯಕ ಗೇಮ್‌ನ ಆರಂಭದಲ್ಲೇ ಲೂಕಾಸ್‌ 6–1 ಮುನ್ನಡೆ ಪಡೆದಿದ್ದರು. 18ನೇ ಪಾಯಿಂಟ್‌ನಲ್ಲಿ ಸಮಬಲ ಕಂಡಿತು. ಈ ವೇಳೆ ಕಶ್ಯಪ್‌ ಪುಟಿದೆದ್ದರು. ಎರಡು ಮ್ಯಾಚ್‌ ಪಾಯಿಂಟ್‌ಗಳನ್ನು (20–18) ಪಡೆದು ಮುನ್ನುಗ್ಗಿದರು. ಎರಡು ಪಾಯಿಂಟ್‌ ಉಳಿಸಿಕೊಂಡ ಲೂಕಾಸ್‌ 20–20 ಸಮಬಲ ಸಾಧಿಸಿದರು. ಮತ್ತೆ ಒಂದು ಪಾಯಿಂಟ್‌ ಗಳಿಸಿದ ಲೂಕಾಸ್‌ 22–21 ಮುನ್ನಡೆ ಪಡೆದು ರೋಚಕತೆಯನ್ನು ಹೆಚ್ಚಿಸಿದರು.

ಕಶ್ಯಪ್‌ ಮೂರು ನೇರ ಪಾಯಿಂಟ್‌ ಗಳಿಸಿ ಗೆದ್ದರು. ಇನ್ನೊಂದೆಡೆ ಭಾರತದ ರಾಷ್ಟ್ರೀಯ ಚಾಂಪಿಯನ್‌ ಸೌರಭ್‌ ವರ್ಮಾ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಚೀನಾದ ಶಿ ಫೆಂಗ್‌ ವಿರುದ್ಧ ಸೋತರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು