ಗುರುವಾರ , ಏಪ್ರಿಲ್ 9, 2020
19 °C

ಬಾಸ್ಕೆಟ್‌ಬಾಲ್ ಸ್ಟಾರ್ ಕೆವಿನ್ ಡುರಾಂಟ್ ಸೇರಿ ನಾಲ್ವರಿಗೆ ಕೊರೊನಾ ವೈರಸ್ ಸೋಂಕು

ಏಜನ್ಸೀಸ್‌‌ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಇಲ್ಲಿನ ವೃತ್ತಿಪರ ಬಾಸ್ಕೆಟ್‌ ಬಾಲ್‌ ತಂಡ ಬ್ರೂಕ್ಲಿನ್‌ ನೆಟ್ಸ್‌ನ ಪ್ರಮುಖ ಆಟಗಾರ ಕೆವಿನ್ ಡುರಾಂಟ್‌ ಸೇರಿ ಒಟ್ಟು ನಾಲ್ವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಪ್ರತ್ಯೇಕವಾಗಿರಿಸಿ ನಿಗಾ ಇಡಲಾಗಿದೆ.

ಗಾಯಾಳಾಗಿರುವ ಡುರಾಂಟ್‌, ಕಳೆದ ವರ್ಷ ಬ್ರೂಕ್ಲಿನ್‌ ಕ್ಲಬ್ ಸೇರಿಕೊಂಡಿದ್ದರು. ಅವರಿಗೆ ಸೋಂಕು ತಗುಲಿರುವುದನ್ನು ದಿ ಅಥ್ಲೆಟಿಕ್‌ ವೆಬ್‌ಸೈಟ್‌ ವರದಿ ಮಾಡಿದೆ.

‘ಪ್ರತಿಯೊಬ್ಬರೂ ಎಚ್ಚರದಿಂದಿರಿ. ನಿಮ್ಮ ಬಗ್ಗೆ ಕಾಳಜಿ ವಹಿಸಿ ಮತ್ತು ಪ್ರತ್ಯೇಕವಾಗಿರಿ. ನಾವೂ ಅದೇ ಹಾದಿಯಲ್ಲಿದ್ದೇವೆ’ ಎಂದು ಡುರಾಂಟ್‌ ಹೇಳಿರುವುದಾಗಿ ಉಲ್ಲೇಖಿಸಿದೆ.

ಈ ಸಂಬಂಧ ಬ್ರೂಕ್ಲಿನ್‌ ಪ್ರಕಟಣೆ ಹೊರಡಿಸಿದ್ದು, ‘ನಾಲ್ಕೂ ಆಟಗಾರರನ್ನು ಸದ್ಯ ಪ್ರತ್ಯೇಕವಾಗಿರಿಸಲಾಗಿದೆ. ತಂಡದ ಫಿಜಿಷಿಯನ್‌ಗಳು ನಿಗಾ ಇರಿಸಿದ್ದಾರೆ’ ಎಂದು ತಿಳಿಸಿದೆ. ಇತ್ತೀಚೆಗೆ ಪ್ರತಿಷ್ಠಿತ ಎನ್‌ಬಿಎ ಟೂರ್ನಿ ರದ್ದುಗೊಳಿಸುವ ಮುನ್ನ ಬ್ರೂಕ್ಲಿನ್‌ ತಂಡ ಲಾಸ್‌ ಏಂಜಲಿಸ್‌ ಲೇಕರ್ಸ್ ವಿರುದ್ಧ ಸೆಣಸಿತ್ತು. ಮಾರ್ಚ್‌ 10 ರಂದು ನಡೆದಿದ್ದ ಈ ಪಂದ್ಯದಲ್ಲಿ ಲೇಕರ್ಸ್‌ 104–102ರಿಂದ ಸೋಲು ಕಂಡಿದ್ದರು. ಹಾಗಾಗಿ ಲೇಕರ್ಸ್‌ ತಂಡಕ್ಕೂ ಆತಂಕ ಎದುರಾಗಿದೆ.

ನೆಟ್ಸ್‌ ತಂಡದ ನಾಲ್ವರಿಗೆ ಸೋಂಕು ತಗುಲಿರುವುದು ತಿಳಿದು ಬಂದಿದೆ. ನಮ್ಮ ಆಟಗಾರರು ಹಾಗೂ ಸಿಬ್ಬಂದಿ ಜೊತೆಗೆ ಸಂಪರ್ಕದಲ್ಲಿದ್ದೇವೆ ಎಂದು ಲೇಕರ್ಸ್‌ ಹೇಳಿದೆ.

ವಿಶ್ವದಾದ್ಯಂತ ಇದುವರೆಗೆ ಒಟ್ಟು 1,9 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್‌ ಸೊಂಕು ದೃಢ ಪಟ್ಟಿದ್ದು, 7900 ಜನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು