ಮಂಗಳವಾರ, ಸೆಪ್ಟೆಂಬರ್ 28, 2021
23 °C

ರವಿಕುಮಾರ್ ದಹಿಯಾ ಮನೆಗೆ ಖಟ್ಟರ್ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ (ಪಿಟಿಐ): ಟೋಕಿಯೊ ಒಲಿಂಪಿಕ್ಸ್‌ ಕುಸ್ತಿಯಲ್ಲಿ ಬೆಳ್ಳಿಪದಕ ಜಯಿಸಿದ ರವಿಕುಮಾರ್ ದಹಿಯಾ ಅವರ ಸೋನಿಪತ್‌ ಸಮೀಪದ ನಹ್ರಿಯಲ್ಲಿರುವ ಮನೆಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್ ಖಟ್ಟರ್ ಭೇಟಿ ನೀಡಿದರು.

ರವಿಯವರ ಅಪ್ಪ, ಅಮ್ಮನನ್ನು ಭೇಟಿಯಾದರು. ರವಿಯ ಕುಸ್ತಿಯ ಪ್ರತಿಭೆಯನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ನಹ್ರಿ ಗ್ರಾಮ ಪಂಚಾಯಿತಿಯವರು ಊರಿನಲ್ಲಿರುವ ಕೆಲವು ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಂತೆ ಖಟ್ಟರ್‌ ಅವರಿಗೆ ಮನವಿಪತ್ರ ಸಲ್ಲಿಸಿದರು. ಅದನ್ನು ಸ್ವೀಕರಿಸಿದ ಪರಿಹಾರ ಕಾರ್ಯಗಳಿಗೆ ಕೂಡಲೇ ಚಾಲನೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು