ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ ಶೂಟಿಂಗ್‌: ಮೆಹುಲಿಗೆ ಚಿನ್ನ

Last Updated 12 ಜನವರಿ 2019, 19:57 IST
ಅಕ್ಷರ ಗಾತ್ರ

ಪುಣೆ: ಅಪೂರ್ವ ಸಾಮರ್ಥ್ಯ ತೋರಿದ ಮೆಹುಲಿ ಘೋಷ್‌, ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದಾರೆ.

ಶನಿವಾರ ನಡೆದ 21 ವರ್ಷದೊಳಗಿನ ಮಹಿಳಾ ಜೂನಿಯರ್‌ ವಿಭಾಗದ 10 ಮೀಟರ್ಸ್‌ ಏರ್‌ ರೈಫಲ್‌ ಸ್ಪರ್ಧೆಯ ಫೈನಲ್‌ನಲ್ಲಿ ಮೆಹುಲಿ 252.1 ಸ್ಕೋರ್‌ ಗಳಿಸಿ ಈ ಸಾಧನೆ ಮಾಡಿದರು. 18 ವರ್ಷ ವಯಸ್ಸಿನ ಈ ಶೂಟರ್‌ ಅರ್ಹತಾ ಹಂತದಲ್ಲಿ 629.4 ಸ್ಕೋರ್‌ ಸಂಗ್ರಹಿಸಿ ಮಿಂಚಿದ್ದರು.

ಪಶ್ಚಿಮ ಬಂಗಾಳದ ಮೆಹುಲಿ, ಯೂತ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಹಿರಿಮೆ ಹೊಂದಿದ್ದಾರೆ.

ಪುರುಷರ ಜೂನಿಯರ್‌ ವಿಭಾಗದ 25 ಮೀಟರ್ಸ್‌ ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ಸ್ಪರ್ಧೆಯ ಚಿನ್ನ ಹರಿಯಾಣದ ಆದರ್ಶ್‌ ಸಿಂಗ್‌ ಅವರ ಪಾಲಾಯಿತು. ಅವರು 30 ಸ್ಕೋರ್‌ ಗಳಿಸಿದರು.

17 ವರ್ಷದೊಳಗಿನ ಮಹಿಳಾ ಯೂತ್‌ ವಿಭಾಗದ 10 ಮೀಟರ್ಸ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಗುಜರಾತ್‌ನ ಹೀನಾ ಜಯೇಶ್‌ ಭಾಯ್‌ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಅವರು 247.5 ಸ್ಕೋರ್‌ ಕಲೆಹಾಕಿದರು.

ಮಾನವಾದಿತ್ಯಗೆ ಚಿನ್ನ: ರಾಜಸ್ಥಾನದ ಮಾನವಾದಿತ್ಯ ಸಿಂಗ್‌ ರಾಥೋಡ್‌ 21 ವರ್ಷದೊಳಗಿನ ಪುರುಷರ ಟ್ರ್ಯಾಪ್‌ ವಿಭಾಗದ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರ ಮಗನಾಗಿರುವ ಮಾನವಾದಿತ್ಯ, ಫೈನಲ್‌ನಲ್ಲಿ 39 ಸ್ಕೋರ್‌ ಗಳಿಸಿದರು.

ಮಹಿಳಾ ಟ್ರ್ಯಾಪ್‌ ವಿಭಾಗದಲ್ಲಿ ಮಧ್ಯಪ್ರದೇಶದ ಮನೀಷಾ ಕೀರ್‌ ಚಿನ್ನ ಜಯಿಸಿದರು. ಅವರು 38 ಸ್ಕೋರ್‌ ಸಂಗ್ರಹಿಸಿದರು.

ಮೀನುಗಾರ ಕುಟುಂಬದ ಮನೀಷಾ, ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT