ನಾಪೋಕ್ಲು (ಕೊಡಗು): ಕುಲ್ಲೇಟಿರ ತಂಡದವರು ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ 6–0 ಗೋಲುಗಳಿಂದ ಕರ್ತಮಾಡ ತಂಡದವರ ವಿರುದ್ಧ ಭರ್ಜರಿ ಜಯ ಸಾಧಿಸಿದರು.
ಸಮೀಪದ ಚೆರಿಯ ಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಡೇಡ ತಂಡದವರು 1-0ರಿಂದ ಕುಂದತ್ ಮಾಳೇಟಿರ (ಕುಕ್ಕುಲೂರು) ತಂಡದವರ ವಿರುದ್ದ ರೋಚಕ ಜಯ ಸಾಧಿಸಿದರೆ, ಮುಕ್ಕಾಟಿರ(ಪುಲಿಕೋಟು) 4-0ರಲ್ಲಿ ಕೋಡಿರ ತಂಡದವರನ್ನು ಮಣಿಸಿದರು.
ಚೌರೀರ (ಹೊದ್ದೂರು) 3-0 ರಲ್ಲಿ ನೆರವಂಡ ವಿರುದ್ಧ, ಅಲ್ಲಂಡ 5-3 ರಲ್ಲಿ ಚೆರಿಯಪಂಡ ವಿರುದ್ದ, ಮುರುವಂಡ 3-0 ರಲ್ಲಿ ಚೋಯಮಾಡಂಡ ತಂಡದ ವಿರುದ್ಧ, ಮಾರ್ಚಂಡ 5-2 ರಲ್ಲಿ ಚೆರುವಾಳಂಡ ವಿರುದ್ದ, ಐನಂಡ 4-2 ರಲ್ಲಿ ಪರದಂಡ ವಿರುದ್ಧ, ಮೇಕೇರಿರ 4-0ರಲ್ಲಿ ಪೊನ್ನಚೆಟ್ಟೀರ ವಿರುದ್ದ ಗೆದ್ದವು.
ನೆಲ್ಲಮಕ್ಕಡ 4-0 ರಲ್ಲಿ ಮೂಕಳೇರ ವಿರುದ್ದ, ಚೆಕ್ಕೇರ 3-0 ರಲ್ಲಿ ಉದಿಯಂಡ ವಿರುದ್ಧ, ಕೋದಂಡ 1-0ರಲ್ಲಿ ಚೌರೀರ(ಹೊದವಾಡ) ವಿರುದ್ಧ ಹಾಗೂ ಇಟ್ಟೀರ3-0 ರಲ್ಲಿ ಮಲ್ಲಮಾಡ ತಂಡದ ವಿರುದ್ಧ ಜಯ ಸಾಧಿಸಿದವು.
ಐಚೆಟ್ಟೀರ ಶಾಂತೆಯಂಡ ತಂಡದ ವಿರುದ್ದ 3-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಕಲಿಯಂಡ ತಂಡದವರು 2-0ರಲ್ಲಿ ತೀತಮಾಡ ವಿರುದ್ದ, ಚೇಂದಿರ ತಂಡದವರು 4-0 ರಲ್ಲಿ ಅಪ್ಪನೆರವಂಡ ತಂಡದವರ ವಿರುದ್ದ, ಪುದಿಯೊಕ್ಕಡ ತಂಡದವರು 2-0 ರಲ್ಲಿ ಶಿವಚಾಳಿಯಂಡ ವಿರುದ್ಧ, ಕೊಂಗಂಡ 2-0ರಲ್ಲಿ ಚೆಯ್ಯಂಡ ವಿರುದ್ದ, ಬಾರಿಯಂಡ ತಂಡದವರು 1-0ರಲ್ಲಿ ತಂಬುಕುತ್ತಿರ ವಿರುದ್ಧ ಗೆದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.