ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಪುಚ್ಚಿಮಡ ತಂಡಕ್ಕೆ ಭರ್ಜರಿ ಜಯ

ಕೊಡವ ಕೌಟುಂಬಿಕ ಹಾಕಿ ಟೂರ್ನಿ; 8–0 ಗೋಲುಗಳ ಗೆಲುವು
Last Updated 21 ಮಾರ್ಚ್ 2023, 18:43 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು ಜಿಲ್ಲೆ): ಯಶ್ವಿನ್‌ ಗಣಪತಿ ಗಳಿಸಿದ ‘ಡಬಲ್‌ ಹ್ಯಾಟ್ರಿಕ್‌’ ಗೋಲುಗಳ ನೆರವಿನಿಂದ ಪುಚ್ಚಿಮಡ ತಂಡವು ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.

ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರದ ‍ಪಂದ್ಯದಲ್ಲಿ ಪುಚ್ಚಿಮಡ ತಂಡದವರು 8–0 ಗೋಲುಗಳಿಂದ ಮಲ್ಲಂಗಡ ತಂಡವನ್ನು ಮಣಿಸಿದರು.

ಕನ್ನಂಡ ತಂಡವು ಚಿಲ್ಲವಂಡ ವಿರುದ್ಧ 7–0 ಗೋಲುಗಳ ಮೂಲಕ ಭರ್ಜರಿ ಜಯಸಾಧಿಸಿದರು. ಕನ್ನಂಡ ತಂಡದ ರೋಹನ್ ಅಯ್ಯಪ್ಪ ಅವರೂ ‘ಡಬಲ್‌ ಹ್ಯಾಟ್ರಿಕ್‌’ ಸಾಧನೆ ಮಾಡಿದರು.

ಮುಕ್ಕಾಟಿರ (ಕಡಗದಾಳು) ತಂಡವು 5-0 ಗೋಲುಗಳಿಂದ ಅನ್ನಾಡಿಯಂಡ ವಿರುದ್ಧ, ಚೊಟ್ಟೆಯಂಡಮಾಡ ತಂಡವು 4-0ಯಿಂದ ದೇಯಂಡ ತಂಡದ ವಿರುದ್ಧ, ಐತಿಚಂಡ ತಂಡವು 4-0ಯಿಂದ ಕಟ್ಟೇರ ತಂಡದ ವಿರುದ್ಧ, ಮರುವಂಡ ತಂಡವು 2-0 ಅಂತರದಿಂದ ಬೊಪ್ಪಡತಂಡ ತಂಡದ ವಿರುದ್ದ, ನಾಟೋಳಂಡ ತಂಡದವರು 3-0 ಗೋಲುಗಳಿಂದ ಪಟ್ರಂಗಡ ತಂಡದ ವಿರುದ್ಧ ಜಯ ಗಳಿಸಿದರು.

ಚೆರುಮಂದಂಡ ತಂಡದವರು 4-1ರಿಂದ ಅಜ್ಜಿನಂಡ ತಂಡವನ್ನು ಮಣಿಸಿದರೆ, ಮಾಚಿಮಾಡ ತಂಡವು 4–0 ಗೋಲುಗಳಿಂದ ಮಂಡಿರ (ಮಾದಾಪುರ) ತಂಡದ ವಿರುದ್ಧ, ಮಲ್ಲಜ್ಜಿರ ತಂಡವು 5-0ರಿಂದ ಹಂಚೆಟ್ಟಿರ ವಿರುದ್ಧ, ಪೊಂಜಂಡ ತಂಡದವರು ತೀತೀರ(ಹುದಿಕೇರಿ) ತಂಡದ ವಿರುದ್ಧ ಜಯ ಗಳಿಸಿದರು.

ತೆಕ್ಕಡ ತಂಡವು 1–0ರಿಂದ ಪಾಡೆಯಂಡ ವಿರುದ್ಧ, ಬೊಳ್ಳಂಡ ತಂಡವು 2-0 ಅಂತರದಿಂದ ಮೊಣ್ಣಂಡ ತಂಡದ ವಿರುದ್ಧ, ಅವರೇಮಾದಂಡ ತಂಡದವರು 1-0ರಿಂದ ಚೆನ್ನಪಂಡ ಎದುರು, ಚೀಯಕಪೂವಂಡ ತಂಡವು 4-1ರಿಂದ ಬೊಜ್ಜಂಗಡ ವಿರುದ್ಧ ಗೆಲುವು ಸಾಧಿಸಿದರು.

ಮೂವೇರ, ಮುಕ್ಕಾಟಿರ (ಮೂವತ್ತೋಕ್ಲು), ಆಪಟ್ಟಿರ, ಜಮ್ಮಡ, ಆಪಾಡಂಡ ತಂಡಗಳು ವಾಕ್ ಓವರ್ ಮೂಲಕ ಮುಂದಿನ ಸುತ್ತು ಪ್ರವೇಶಿಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT