ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್: ಅಥ್ಲೆಟಿಕ್ಸ್‌ಗೆ ಭಾರತದಲ್ಲೇ ನಿರ್ಮಿಸಿದ ಕ್ರೀಡಾ ಸಲಕರಣೆಗಳು

Last Updated 16 ಜುಲೈ 2021, 12:25 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಬಳಸಲಾಗುವ ಕ್ರೀಡಾ ಸಲಕರಣೆಗಳನ್ನು ಭಾರತದ ಕಂಪನಿಗಳೂ ತಯಾರಿಸಿ ಕೊಡಲಿವೆ. ವಿಶ್ವ ಅಥ್ಲೆಟಿಕ್ಸ್ ಮಂಡಳಿ (ಐಎಎಎಫ್‌) ಪಟ್ಟಿ ಮಾಡಿರುವ ಆರು ಕಂಪನಿಗಳಲ್ಲಿ ಇವುಗಳ ಹೆಸರಿದೆ.

ಶಾಟ್‌ ಪಟ್‌, ಡಿಸ್ಕಸ್ ಥ್ರೊ ಮತ್ತು ಹ್ಯಾಮರ್‌ ಥ್ರೊ ಸ್ಪರ್ಧೆಗಳಿಗೆ ಸಲಕರಣೆಗಳನ್ನು ಉತ್ಪಾದಿಸುವವರ ಪಟ್ಟಿಯಲ್ಲಿ ಭಾರತ ಮೂಲದ ಆನಂದ್‌ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಇಕ್ವಿಪ್‌ಮೆಂಟ್‌ (ಎಟಿಇ), ಭಲ್ಲಾ ಇಂಟರ್‌ನ್ಯಾಶನಲ್‌ ಮತ್ತು ನೆಲ್ಕೊ ಕಂಪನಿಗಳು ಇವೆ.

ಶಾಟ್‌ಪಟ್‌ (7.26 ಕೆಜಿ), ಡಿಸ್ಕಸ್ (2 ಕೆಜಿ) ಮತ್ತು ಹ್ಯಾಮರ್‌ಗಳನ್ನು (7.26 ಕೆಜಿ) ಈ ಕಂಪನಿಗಳು ಒದಗಿಸಲಿವೆ.

‘ನಾವು ಶಾಟ್ ಪುಟ್, ಡಿಸ್ಕಸ್ ಥ್ರೋ ಮತ್ತು ಹ್ಯಾಮರ್ ಥ್ರೋಗಳಲ್ಲಿ ತಲಾ ಆರು ಉಪಕರಣಗಳನ್ನು ಒದಗಿಸುತ್ತಿದ್ದೇವೆ. ಆದ್ದರಿಂದ, ಪುರುಷರು ಮತ್ತು ಮಹಿಳೆಯರ ಸ್ಪರ್ಧೆಗಳಿಗಾಗಿ ನಾವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಒಟ್ಟು 36 ಉಪಕರಣಗಳನ್ನು ಒದಗಿಸುತ್ತಿದ್ದೇವೆ‘ ಎಂದು ಎಟಿಇ ಕಂಪನಿಯ ಆದರ್ಶ್ ಆನಂದ್ ತಿಳಿಸಿದ್ದಾರೆ.

‘1992ರ ಬಾರ್ಸಿಲೋನಾ ಕ್ರೀಡಾಕೂಟದಿಂದ ಇಲ್ಲಿಯವರೆಗೆ ನಮ್ಮ ಉಪಕರಣಗಳು ಬಳಕೆಯಲ್ಲಿವೆ. ವಾಸ್ತವವಾಗಿ, ಅಥ್ಲೆಟಿಕ್ಸ್‌ನೊಂದಿಗಿನ ನಮ್ಮ ಪಯಣವು ಟೋಕಿಯೊದಲ್ಲಿ ನಡೆದ 1991ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಾರಂಭವಾಯಿತು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT