ಹೊಸ ವಿಭಾಗದಲ್ಲಿ ಮಿಂಚಿದ ಮೇರಿ

ಮಂಗಳವಾರ, ಮಾರ್ಚ್ 26, 2019
27 °C

ಹೊಸ ವಿಭಾಗದಲ್ಲಿ ಮಿಂಚಿದ ಮೇರಿ

Published:
Updated:
Prajavani

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ 51 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿಯಲು ತೀರ್ಮಾನಿಸಿರುವ ಭಾರತದ ಬಾಕ್ಸರ್‌ ಎಂ.ಸಿ.ಮೇರಿ ಕೋಮ್‌ ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಮೇರಿ, 51 ಕೆ.ಜಿ. ವಿಭಾಗದಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಗೆಲುವಿನ ಮಂದಹಾಸ ಬೀರಿದ್ದಾರೆ.

ಅವರು ಉಕ್ರೇನ್‌ನ ಡೇರಿಯಾ ಶಿಯೆರ್‌ಹೀವಾ, ಜರ್ಮನಿಯ ಉರ್ಸುಲಾ ಗೊಟ್ಟಾಲೊಬ್‌ ಮತ್ತು ನಾರ್ವೆಯ ವೆರೋನಿಕಾ ಲಾಸ್ವಿಕ್‌ ಅವರನ್ನು ಮಣಿಸಿದ್ದಾರೆ. ಎಲ್ಲರ ವಿರುದ್ಧವೂ ಭಾರತದ ಬಾಕ್ಸರ್‌ 5–0 ಅಂತರದಿಂದ ಗೆದ್ದಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರು ಚಿನ್ನದ ಪದಕಗಳನ್ನು ಜಯಿಸಿ ದಾಖಲೆ ನಿರ್ಮಿಸಿರುವ ಮೇರಿ, ಮೊದಲು 48 ಕೆ.ಜಿ. ವಿಭಾಗದಲ್ಲಿ ಆಡುತ್ತಿದ್ದರು. 2020ರ ಒಲಿಂಪಿಕ್ಸ್‌ನಿಂದ ಈ ವಿಭಾಗವನ್ನು ತೆಗೆದು ಹಾಕಿರುವುದರಿಂದ ಅವರು 51 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಭಾರತದ ಬಾಕ್ಸರ್‌, 2012ರ ಒಲಿಂಪಿಕ್ಸ್‌ನಲ್ಲಿ 51 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.‌

‘ದೇಹದ ತೂಕವನ್ನು 51 ಕೆ.ಜಿ.ಗೆ ಹೆಚ್ಚಿಸಿಕೊಂಡು ಕಣಕ್ಕಿಳಿಯುವುದು ಅಷ್ಟು ಸುಲಭವಾಗಿರಲಿಲ್ಲ. ಬರ್ಲಿನ್‌ ಪ್ರವಾಸದ ಮೂರು ಪಂದ್ಯಗಳಲ್ಲೂ ಗೆದ್ದಿದ್ದರಿಂದ ವಿಶ್ವಾಸ ಹೆಚ್ಚಿದೆ. ಇದರ ಶ್ರೇಯ, ಕೋಚ್‌ ಚೋಟೆ ಲಾಲ್‌ ಯಾದವ್‌ ಅವರಿಗೆ ಸಲ್ಲಬೇಕು. ಮುಂದಿನ ಟೂರ್ನಿಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿ ಪದಕಗಳನ್ನು ಜಯಿಸಲು ಪ್ರಯತ್ನಿಸುತ್ತೇನೆ’ ಎಂದು ಮೇರಿ ನುಡಿದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !