ಶನಿವಾರ, ಮೇ 28, 2022
31 °C

ಉಡುಪಿಯಲ್ಲಿ ಮಾಸ್ಟರ್ಸ್ ಅಥ್ಲೆಟಿಕ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ ಮತ್ತು ಉಡುಪಿ ಜಿಲ್ಲಾ ಸಂಸ್ಥೆ ಆಯೋಜಿಸಿರುವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ ಡಿಸೆಂಬರ್ 11 ಮತ್ತು 12ರಂದು ಉಡುಪಿಯಲ್ಲಿ ನಡೆಯಲಿದೆ.

ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸ್ಪರ್ಧೆಗಳು ನಡೆಯಲಿದ್ದು ಪ್ರತಿ ಕ್ರೀಡಾಪಟುವಿಗೆ ಮೂರು ವಿಭಾಗಗಳಲ್ಲಿ ಕಣಕ್ಕೆ ಇಳಿಯಲು ಅವಕಾಶವಿದೆ. ಫೆಬ್ರುವರಿಯಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡದ ಆಯ್ಕೆ ಇಲ್ಲಿ ನಡೆಯಲಿದೆ.

100, 200, 400, 800, 1500, 5000 ಮತ್ತು 10000 ಮೀಟರ್ಸ್ ಓಟದ ಸ್ಪರ್ಧೆ 60 ವರ್ಷದ ವರೆಗಿನವರಿಗಾಗಿ ನಡೆಯಲಿದೆ. 35ರಿಂದ 45 ವರ್ಷದ ವರೆಗಿನವರಿಗೆ 5 ಕಿಮೀ ವೇಗ ನಡಿಗೆ ಮತ್ತು 110 ಮೀಟರ್ಸ್ ಹರ್ಡಲ್ಸ್‌, 50ರಿಂದ 55 ವರ್ಷದ ವರೆಗಿನವರಿಗೆ 100 ಮೀಟರ್ಸ್ ಹರ್ಡಲ್ಸ್‌ ನಡೆಯಲಿದೆ.

ಮಹಿಳೆಯರ ವಿಭಾಗದಲ್ಲಿ 100, 200, 400, 800, 1500, 5000 ಮತ್ತು 10000 ಮೀಟರ್ಸ್ ಓಟ,  5 ಕಿಮೀ ವೇಗ ನಡಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು