ಶನಿವಾರ, ಜೂನ್ 6, 2020
27 °C
ಕ್ರೀಡಾಪಟುಗಳು ಮಾದರಿ ಸಂಗ್ರಹಕ್ಕೆ ಡಿಸಿಒಗಳನ್ನು ಕಳುಹಿಸಲು ಸಾಧ್ಯವಿಲ್ಲ: ನಾಡಾ

ರಕ್ತದ ಮಾದರಿ ಸಂಗ್ರಹ ಇಲ್ಲ: ನಾಡಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕ್ರೀಡಾ ಚಟು ವಟಿಕೆ ಮತ್ತು ತರಬೇತಿ ಕೈಗೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಉದ್ದೀಪನ ಮದ್ದು ಸೇವನೆ ತಡೆ ಘಟಕವು (ನಾಡಾ) ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳ ಪಡಿಸಲು ಸಿದ್ಧತೆ ನಡೆಸಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಕ್ತದ ಮಾದರಿ ಬದಲು ಕೇವಲ ಮೂತ್ರದ ಮಾದರಿ ಸಂಗ್ರಹಕ್ಕೆ  ಮಾತ್ರ ಮುಂದಾಗಲಿದೆ.

ಸೋಮವಾರ ಮಾತ ನಾಡಿದ ನಾಡಾ ಮಹಾನಿರ್ದೇಶಕ ನವೀನ್ ಅಗರವಾಲ್, ‘ರಕ್ತದ ಮಾದರಿಗಳನ್ನು ಬೇಗನೇ ಪ್ರಯೋಗಾಲಯಗಳಿಗೆ ತಲುಪಿಸ ಬೇಕಾಗುತ್ತದೆ. ಅದು ಈಗಿನ ಪರಿಸ್ಥಿತಿಯಲ್ಲಿ ಕಷ್ಟ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದರು.

‘ಕೋವಿಡ್ ಎದುರಿನ ಹೋರಾಟದಲ್ಲಿ ಪಾಲ್ಗೊಂಡಿರುವ ಉದ್ದೀಪನ ಮದ್ದು ಸೇವನೆ ನಿಯಂ ತ್ರಣ ಅಧಿಕಾರಿಗಳನ್ನು (ಡಿಸಿಒ) ಸದ್ಯ ಮಾದರಿ ಸಂಗ್ರಹಿಸಲು ಕರೆಸಿಕೊಳ್ಳಲಾಗುವುದಿಲ್ಲ. ಅವರು ಕೋವಿಡ್ ವಿರುದ್ಧ ಹೋರಾಟದಲ್ಲೇ ಮುಂದುವರಿಯಲಿದ್ದಾರೆ. ಕ್ರೀಡಾಪಟುಗಳ ಮಾದರಿ ಪರೀಕ್ಷೆಗೆ ಸಂಬಂಧಿಸಿ ವಿವರವಾದ ಮಾರ್ಗನಿರ್ದೇಶನಗಳನ್ನು ಸಿದ್ಧಪಡಿಸಿ ಕ್ರೀಡಾ ಸಚಿವಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅವರು ವಿವರಿಸಿದರು.

ಅಗರವಾಲ್ ಮತ್ತು ನಾಡಾದ ಹಿರಿಯ ಅಧಿಕಾರಿಗಳು ವಿಡಿಯೊ ಸಂವಾದದ ಮೂಲಕ ಡಿಸಿಒಗಳ ಜೊತೆ ಮಾತುಕತೆ ನಡೆಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು