ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಪನ್ ವಾಟರ್‌ ಈಜು ಸ್ಪರ್ಧೆ: ಮಿಂಚಿದ ಪ್ರೀತಾ, ಪ್ರತ್ಯಯ್‌

Last Updated 21 ಜನವರಿ 2023, 20:21 IST
ಅಕ್ಷರ ಗಾತ್ರ

ಉಡುಪಿ: ಕರ್ನಾಟಕದ ವಿ.ಪ್ರೀತಾ ಮತ್ತು ಪಶ್ಚಿಮ ಬಂಗಾಳದ ಪ್ರತ್ಯಯ್‌ ಭಟ್ಟಾಚಾರ್ಯ ಅವರು ಮಲ್ಪೆ ಕಡಲ ತೀರದಲ್ಲಿ ನಡೆಯುತ್ತಿರುವ ಬೀಚ್ ಉತ್ಸವದ ಅಂಗವಾಗಿ ಶನಿವಾರ ನಡೆದ ರಾಷ್ಟ್ರೀಯ ಓಪನ್ ವಾಟರ್‌ ಈಜು ಸ್ಪರ್ಧೆಯ 10 ಕಿ.ಮೀ ವಿಭಾಗದಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಮಹಿಳೆಯರ ಸ್ಪರ್ಧೆಯಲ್ಲಿ ಪ್ರೀತಾ 3 ತಾಸು 7 ನಿಮಿಷ 18 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ ಪುರುಷರ ವಿಭಾಗದಲ್ಲಿ ಪ್ರತ್ಯಯ್ ಗುರಿ ತಲುಪಲು 2 ತಾಸು 2 ನಿಮಿಷ 28 ಸೆಕೆಂಡುಗಳನ್ನು ತೆಗೆದುಕೊಂಡರು. 7.5 ಕಿಮೀ ಮತ್ತು 5 ಕಿಮೀ ವಿಭಾಗಗಳಲ್ಲಿ ಕರ್ನಾಟಕದ ಈಜುಪಟುಗಳು ಪಾರಮ್ಯ ಮೆರೆದರು.

ಫಲಿತಾಂಶಗಳು
ಪುರುಷರ 10 ಕಿಮೀ:
ಪ್ರತ್ಯಯ್ ಭಟ್ಟಾಚಾರ್ಯ (ಪಶ್ಚಿಮ ಬಂಗಾಳ)–1. ಕಾಲ: 2 ತಾಸು 2ನಿ 28ಸೆ, ಲಿತೀಶ್‌ ಜಿ.ಗೌಡ (ಕರ್ನಾಟಕ)–2, ಸಂಪನ್‌ ಶೇಲಾರ್ (ಮಹಾರಾಷ್ಟ್ರ)–3; 7.5 ಕಿ.ಮೀ: ಎಚ್‌.ಎಂ.ಪ್ರಶಂಸ್ (ಕರ್ನಾಟಕ)–1. ಕಾಲ :1ತಾಸು 13ನಿ 59ಸೆ, ಮೊಹಮ್ಮದ್ ಅಬ್ದುಲ್‌ ಬಸಿತ್‌ (ಕರ್ನಾಟಕ)–2, ಆಯನ್ ಅಲಿ ಖಾನ್ (ಛತ್ತೀಸ್‌ಗಢ)–3; 5 ಕಿಮೀ: ಅಥರ್ವರಾಜ್ ಪಾಟೀಲ್ (ಮಹಾರಾಷ್ಟ್ರ)–1. ಕಾಲ: 49 ನಿಮಿಷ 33 ಸೆ, ರೇಣುಕಾಚಾರ್ಯ ಎಚ್‌ (ಕರ್ನಾಟಕ)–2, ಚಿಂತನ್ ಶೆಟ್ಟಿ (ಕರ್ನಾಟಕ)–3.

ಮಹಿಳೆಯರ 10 ಕಿಮೀ: ವಿ.ಪ್ರೀತಾ (ಕರ್ನಾಟಕ)–1, ಕಾಲ: 3 ಗಂಟೆ 7ನಿ 18 ಸೆ, ಎಸ್‌.ವಿ.ನಿಖಿತಾ (ಕರ್ನಾಟಕ)–2, ದ್ವಿಪನ್ವಿತಾ ಮಂಡಲ್ (ಪಶ್ಚಿಮ ಬಂಗಾಳ)–3; 7.5 ಕಿ.ಮೀ: ಅಶ್ಮಿತಾ ಚಂದ್ರ (ಕರ್ನಾಟಕ)–1. ಕಾಲ: 1ತಾಸು 19ನಿ 42ಸೆ, ಅನುಷ್ಕಾ ಪಾಟೀಲ (ಮಹಾರಾಷ್ಟ್ರ)–2, ಪಿಕೆಆರ್‌ಆರ್‌ ಮಹಾಲಕ್ಷ್ಮಿ (ತಮಿಳುನಾಡು)–3; 5 ಕಿಮೀ: ಶ್ರೀ ಚರಣಿ ತುಮು (ಕರ್ನಾಟಕ)–1. ಕಾಲ: 52 ನಿ 7 ಸೆ, ಆರ್ಣ ಎಂ.ಪಿ (ಕರ್ನಾಟಕ)–2, ಅಸ್ರಾ ಸುಧೀರ್‌ (ಕರ್ನಾಟಕ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT