ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ ಪ್ಯಾರಿಸ್ ಪೇಯ್ನ್‌ ತರಬೇತಿ

Last Updated 23 ಫೆಬ್ರುವರಿ 2023, 16:12 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಬಲ್ಲ ಈಜುಪಟುಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ನಗರದ ನೆಟ್ಟಕಲ್ಲಪ್ಪ ಈಜು ಕೇಂದ್ರವು (ಎನ್‌ಎಸಿ), ಇಂಗ್ಲೆಂಡ್‌ನ ‘ಮಾಸ್ಟರ್ ಟ್ರೇನರ್‌’ ಪ್ಯಾರಿಸ್‌ ಪೇಯ್ನ್‌ ಅವರನ್ನು ತರಬೇತಿಗೆ ನಿಯೋಜಿಸಿದೆ.

ಕ್ರೀಡಾಪಟುಗಳಿಗೆ ನವೀನ ರೀತಿಯ ತರಬೇತಿ ನೀಡುವಲ್ಲಿ ಅಪಾರ ಅನುಭವ ಹೊಂದಿರುವ ಪೇಯ್ನ್‌, ಇಂಗ್ಲೆಂಡ್‌ನ ಪ್ಲಿಮತ್‌ನಲ್ಲಿರುವ ಫಿಸಿಯೊ– ಕಂಡೀಷನಿಂಗ್ ಆ್ಯಂಡ್ ಸ್ಪೋರ್ಟ್ಸ್‌ ಪರ್ಫಾಮೆನ್ಸ್‌ ಕೇಂದ್ರದ ನಿರ್ದೇಶಕರಾಗಿದ್ಧಾರೆ.

‘ಪೇಯ್ನ್‌ ಅವರು ಎನ್‌ಎಸಿ ಕೋಚ್‌ಗಳ ನೆರವಿನೊಂದಿಗೆ ವಿಭಿನ್ನ ರೀತಿಯ ತರಬೇತಿ ಕಾರ್ಯಕ್ರಮ ಆಯೋಜಿಸಲಿದ್ದಾರೆ. ಈಜುಪಟುಗಳಿಗೆ ವಿವಿಧ ಹಂತಗಳಲ್ಲಿ ವೈಜ್ಞಾನಿಕ ಹಾಗೂ ವ್ಯವಸ್ಥಿತ ರೀತಿಯ ಸ್ಟ್ರೆಂತ್‌ ಮತ್ತು ಕಂಡೀಷನಿಂಗ್‌ನ ಶಿಬಿರ ಏರ್ಪಡಿಸಲಾಗುವುದು’ ಎಂದು ಕೇಂದ್ರದ ಮುಖ್ಯಸ್ಥ ಡಾ.ವರುಣ್‌ ನಿಜಾವನ್‌ ತಿಳಿಸಿದ್ದಾರೆ.

‘ಒಲಿಂಪಿಕ್ಸ್‌ ಮತ್ತು ಕಾಮನ್‌ವೆಲ್ತ್‌ ಕೂಟಗಳಲ್ಲಿ ಪಾಲ್ಗೊಂಡಿರುವ ರುಟಾ ಮೆಲುಟಿಟ್‌, ಬೆನ್ ಪ್ರೌಡ್‌, ಸ್ಯಾಮ್‌ ಸಿಲ್ಸ್‌, ಬ್ರಿಯೊನಿ ಫ್ರಾಸ್ಟ್‌ ಮತ್ತು ಲಾರಾ ಸ್ಟೀಫನ್ಸ್‌ ಸೇರಿದಂತೆ ಹಲವು ಕ್ರೀಡಾಪಟುಗಳಿಗೆ ಪೇಯ್ನ್‌ ತರಬೇತಿ ನೀಡಿದ್ದಾರೆ. ಪೇಯ್ನ್‌ ಅವರೊಂದಿಗಿನ ಸಹಭಾಗಿತ್ವವು ಎನ್‌ಎಸಿಯಲ್ಲಿರುವ ಉದಯೋನ್ಮುಖ ಈಜುಪಟುಗಳಿಗೆ ಉತ್ತೇಜನ ನೀಡಲಿದೆ’ ಎಂದು ಹೇಳಿದರು.

‘ಲಾಂಗ್‌ ಕೋರ್ಸ್‌, ಶಾರ್ಟ್‌ ಕೋರ್ಸ್‌ ಮತ್ತು ಬೇಬಿ ಪೂಲ್ ಒಳಗೊಂಡಿರುವ ಎನ್‌ಎಸಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಈಜುಪಟುಗಳ ದೈಹಿಕ ಸಾಮರ್ಥ್ಯ ವೃದ್ಧಿಗೆ ಎಲ್ಲ ರೀತಿಯ ಆಧುನಿಕ ಸಲಕರಣೆಗಳು ಇರುವ ಸ್ಟ್ರೆಂಟ್‌ ಮತ್ತು ಕಂಡೀಷನಿಂಗ್‌ ಹಾಲ್‌ ಕೂಡಾ ಇದೆ’ ಎಂದು ಮಾಹಿತಿ ನೀಡಿದರು.

ಭಾರತ ಈಜು ಫೆಡರೇಷನ್‌ ವತಿಯಿಂದ ರಾಷ್ಟ್ರೀಯ ಈಜು ತಂಡಕ್ಕೆ ಬೆಂಗಳೂರಿನಲ್ಲಿ ಈಚೆಗೆ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಪೇಯ್ನ್‌ ಅವರೂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT