ಟೋಕಿಯೊ: ಒಲಿಂಪಿಕ್ಸ್ ಆರಂಭಕ್ಕೂ ಮೊದಲು ತಮಗೆ ಕೋವಿಡ್ ಲಸಿಕೆ ನೀಡಿ ಎಂದು ಅಥ್ಲೀಟ್‌ಗಳು ಮನವಿ ಮಾಡಿಲ್ಲ ಎಂದು ಒಲಿಂಪಿಕ್ಸ್ ಆಯೋಜನಾ ಸಮಿತಿ ಮಂಗಳವಾರ ಹೇಳಿದೆ.

ಇನ್ನೂ ಮೂರು ತಿಂಗಳಲ್ಲಿ (ಜುಲೈನಲ್ಲಿ) ಟೋಕಿಯೊ ಕೂಟ ಆರಂಭವಾಗಲಿದೆ. ಆದರೆ ಜಪಾನ್‌ನಲ್ಲಿ ಲಸಿಕೆ ನೀಡಿಕೆ ಪ್ರಕ್ರಿಯೆ ಬಹಳ (ಇದುವರೆಗೆ ಶೇಕಡ 1ರಷ್ಟು) ನಿಧಾನಗತಿಯಲ್ಲಿರುವುದು ಕಳವಳಕ್ಕೆ ಕಾರಣವಾಗಿದೆ.

‘ಕ್ರೀಡಾಪಟುಗಳಿಗೆ ಕೋವಿಡ್ ಲಸಿಕೆಯ ಕುರಿತು ಪ್ರಶ್ನೆಗಳಿವೆ. ಆದರೆ ಲಸಿಕೆಯನ್ನು ಪಡೆಯಬೇಕೆ ಬೇಡವೇ ಎಂಬುದರ ಕುರಿತಾಗಿಲ್ಲ‘ ಎಂದು ಒಲಿಂಪಿಕ್ಸ್‌ನ ಅಥ್ಲೀಟಗಳ ಸಮಿತಿಯ ಅಧ್ಯಕ್ಷ ನವೊಕಾ ತಕಹಶಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

‘ಒಂದು ವೇಳೆ ಒಲಿಂಪಿಕ್ಸ್ ನಡೆದರೂ ಅದು ಪ್ರೇಕ್ಷಕರಿರುವುದಿಲ್ಲ. ಏಕೆಂದರೆ ದೇಶದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ‘ ಎಂದು ಲಸಿಕೆಯ ಹೊಣೆ ಹೊತ್ತಿರುವ ಜಪಾನ್‌ನ ಸಚಿವ ತಾರೊ ಕೊನೊ ಅವರು ವಾರದ ಹಿಂದೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.