ಗುರುವಾರ , ಏಪ್ರಿಲ್ 9, 2020
19 °C

ಖಾಲಿ ಮೈದಾನದಲ್ಲಿ ಒಲಿಂಪಿಕ್ ಜ್ಯೋತಿ ಹಸ್ತಾಂತರ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಅಥೆ‌ನ್ಸ್: ಟೋಕಿಯೊ ಒಲಿಂಪಿಕ್ಸ್‌ನ ಜ್ಯೋತಿ ಹಸ್ತಾಂತರ ಕಾರ್ಯಕ್ರಮ ಮುಂದಿನ ವಾರ ಅಥೆನ್ಸ್‌ನಲ್ಲಿ, ಖಾಲಿ ಮೈದಾನದಲ್ಲಿ ನಡೆಯಲಿದೆ ಎಂದು ಗ್ರೀಸ್‌ ಒಲಿಂಪಿಕ್ ಸಮಿತಿ ಭಾನುವಾರ ತಿಳಿಸಿದೆ. 

ಪುರಾತನ ಇಲಿಂಪಿಯಾದಲ್ಲಿ ಜ್ಯೋತಿ ಪ್ರಜ್ವಲನ ಕಾರ್ಯಕ್ರಮ ಶುಕ್ರವಾರ ನಡೆದಿತ್ತು. ಆದರೆ ಜ್ಯೋತಿಯ ರಿಲೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಮಾರ್ಚ್ 19ರ ಗುರುವಾರ ಸೆಂಟ್ರಲ್ ಅಥೆನ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಜ್ಯೋತಿ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಆದರೆ ಇದಕ್ಕೆ ಯಾರಿಗೂ ಪ್ರವೇಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1896ರ ಒಲಿಂಪಿಕ್ಸ್ ಕೂಟ ನಡೆದ ಈ ಕ್ರೀಡಾಂಗಣದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ಸಾವಿರಾರು ಮಂದಿ ಸೇರುತ್ತಾರೆ.

ಗ್ರೀಸ್‌ನಲ್ಲಿ ಕೋವಿಡ್ ಸೊಂಕಿಗೆ ಈ ವರೆಗೆ ಮೂರು ಬಲಿಯಾಗಿದ್ದು 228 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು