ಪ್ರೊ ಕಬಡ್ಡಿ: ಪುಣೇರಿ ಪಲ್ಡನ್ ಜಯಭೇರಿ
ಬೆಂಗಳೂರು: ಮೋಹಿತ್ ಗೊಯತ್ ಮತ್ತು ಅಸ್ಲಂ ಇನಾಮದಾರ್ ಅವರ ಮಿಂಚಿನ ಆಟದಿಂದಾಗಿ ಪುಣೇರಿ ಪಲ್ಡನ್ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ಜಯಭೇರಿ ಬಾರಿಸಿತು.
ವೈಟ್‌ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ಪುಣೇರಿ ತಂಡವು 44–38ರಿಂದ ಯುಪಿ ಯೋಧಾ ವಿರುದ್ಧ ಗೆದ್ದಿತು.
ರೇಡರ್ ಮೋಹಿತ್ ಗೋಯತ್ 14 ಅಂಕ ಮತ್ತು ಅಸ್ಲಂ 12 ಅಂಕಗಳನ್ನು ರೇಡಿಂಗ್‌ನಲ್ಲಿ ತಂದುಕೊಟ್ಟರು. ಇದರಿಂದಾಗಿ ತಂಡವು ಗೆಲುವಿನತ್ತ ಮುನ್ನಡೆಯಿತು. ಯೋಧಾ ತಂಡದ ಸುರೇಂದರ್ ಗಿಲ್ 16 ಅಂಕ ಗಳಿಸಿದರು.
ಪಂದ್ಯದ ಮೊದಲಾರ್ಧದ ವಿರಾಮದ ವೇಳೆಗೆ ಉಭಯ ತಂಡಗಳು ತುರುಸಿನ ಪೈಪೋಟಿ ನಡೆಸಿದ್ದವು. ಪುಣೇರಿ ತಂಡವು 21–18ರಿಂದ ಮುನ್ನಡೆಯಲ್ಲಿತ್ತು. ವಿರಾಮದ ನಂತರವೂ ಇದೇ ರೀತಿಯ ಪೈಪೋಟಿ ಮುಂದುವರಿಯಿತು. ಕೊನೆಯವರೆಗೂ ಇದೇ ಅಂತರವನ್ನು ಕಾಯ್ದುಕೊಂಡ ಪುಣೇರಿ ಮಿಂಚಿತು.
ಪುಣೇರಿ ತಂಡವು ಒಟ್ಟು 14 ಪಂದ್ಯಗಳನ್ನು ಆಡಿದೆ. ಏಳು ಗೆದ್ದು, ಅಷ್ಟೇ ಪಂದ್ಯಗಳಲ್ಲಿ ಸೋತಿದೆ. ಯೋಧಾ ತಂಡವು ಐದರಲ್ಲಿ ಗೆದ್ದು, ಆರರಲ್ಲಿ ಸೋತಿದೆ ಮತ್ತು ಮೂರರಲ್ಲಿ ಟೈ ಮಾಡಿಕೊಂಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.