ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್ ಒಲಿಂಪಿಯಾಡ್‌ ವಿಜಯ: ವೆಂಕಟರಾಮ ರಾಜಾ ಅಭಿನಂದನೆ

Last Updated 3 ಸೆಪ್ಟೆಂಬರ್ 2020, 16:52 IST
ಅಕ್ಷರ ಗಾತ್ರ

ಬೆಂಗಳೂರು: ಆನ್‌ಲೈನ್ ಚೆಸ್‌ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡವನ್ನು ಅಖಿಲ ಭಾರತ ಚೆಸ್ ಫೆಡರೇಷನ್ ಅಧ್ಯಕ್ಷ ಮತ್ತು ರಾಮ್ಕೊ ಉದ್ಯಮ ಸಮೂಹದ ಮುಖ್ಯಸ್ಥ ಪಿ.ಆರ್. ವೆಂಕಟರಾಮ ರಾಜಾ ಅಭಿನಂದಿಸಿದ್ದಾರೆ.

‘ದಿಗ್ಗಜ ವಿಶ್ವನಾಥನ್ ಆನಂದ್, ಕೊನೆರು ಹಂಪಿ, ವಿದಿತ್ ಸಂತೋಷ್ ಗುಜರಾತಿ, ಪಿ. ಹರಿಕೃಷ್ಣ, ದ್ರೋಣವಳ್ಳಿ ಹರಿಕಾ, ಅರವಿಂದ ಚಿದಂಬರಂ, ಭಕ್ತಿ ಕುಲಕರ್ಣಿ, ಆರ್. ವೈಶಾಲಿ, ನಿಹಾಲ್ ಸರಿನ್, ಆರ್. ಪ್ರಜ್ಞಾನಂದ, ದಿವ್ಯಾ ದೇಶಮುಖ ಮತ್ತು ವಂತಿಕಾ ಅಗರವಾಲ್ ಅವರಿದ್ದ ತಂಡವು ಅಮೋಘ ಸಾಧನೆ ಮಾಡಿದೆ. ತಾಂತ್ರಿಕ ಕಾರಣಗಳಿಂದ ರಷ್ಯಾದೊಂದಿಗೆ ಮೊದಲ ಸ್ಥಾನವನ್ನು ಹಂಚಿಕೊಂಡಿದೆ. ಟೂರ್ನಿಯಲ್ಲಿ ನಮ್ಮ ತಂಡದ ಆಟ ಸರ್ವಶ್ರೇಷ್ಠವಾಗಿತ್ತು’ ಎಂದು ರಾಜಾ ಶ್ಲಾಘಿಸಿದ್ದಾರೆ.

‘ಭಾರತದ ಚೆಸ್‌ ಕ್ಷೇತ್ರಕ್ಕೆ ಈಗ ಚಿನ್ನದ ಮೆರಗು ಬಂದಿದೆ. ಈ ಸಾಧನೆಗಾಗಿ ಫೆಡರೇಷನ್‌ನಿಂದ ಎಲ್ಲ ಆಟಗಾರರಿಗೂ ಸೂಕ್ತ ಕಾಣಿಕೆ ನೀಡಲಾಗುವುದು’ ಎಂದು ರಾಜಾ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT