ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾರ್‌ ಹ್ಯಾಮರ್‌’ ಮೇಲೆ ಎಲ್ಲರ ಕಣ್ಣು

ಬೆಂಗಳೂರು ಟರ್ಫ್‌ ಕ್ಲಬ್: ಶ್ರೀಮೀನಾಕ್ಷಿ ಸುಂದರೇಶ್ವರ ಬೆಂಗಳೂರು ಡರ್ಬಿ ಇಂದು
Last Updated 25 ಜನವರಿ 2020, 19:40 IST
ಅಕ್ಷರ ಗಾತ್ರ

ಬೆಂಗಳೂರು: ಸುಮಾರು ₹1.41 ಕೋಟಿ ಮೊತ್ತದ ಒಟ್ಟು ಬಹುಮಾನ ಹೊಂದಿರುವ ‘ಶ್ರೀ ಮೀನಾಕ್ಷಿ ಸುಂದರೇಶ್ವರ ಬೆಂಗಳೂರು ಡರ್ಬಿ’ ಚಳಿಗಾಲದಅತ್ಯಂತ ಶ್ರೀಮಂತ ಹಾಗೂ ವರ್ಣರಂಜಿತ ರೇಸ್‌. ಬೆಂಗಳೂರು ಟರ್ಫ್‌ ಕ್ಲಬ್‌ ಮತ್ತು ಎನ್‌.ಸ್ವರೂಪ್‌ ಕುಮಾರ್‌ ಜಂಟಿಯಾಗಿ ಆಯೋಜಿಸು ತ್ತಿರುವ ಡರ್ಬಿಭಾನುವಾರ ಸಂಜೆ 4.15ಕ್ಕೆ ಬಿ.ಟಿ.ಸಿ ಆವರಣದಲ್ಲಿ ನಡೆಯಲಿದೆ.

ಡರ್ಬಿ ವಿಜೇತ ಕುದುರೆಯು ತನ್ನ ಮಾಲೀಕರಿಗೆ ₹ 2 ಲಕ್ಷ ಮೌಲ್ಯದ ಆಕರ್ಷಕ ಟ್ರೋಫಿಯೊಂದಿಗೆ ಸುಮಾರು ₹ 69.26 ಲಕ್ಷ ದೊರಕಿಸಿಕೊಡಲಿದೆ.

‘ಸ್ಟ್ರೀಮಿಂಗ್‌ ಗೋಲ್ಡ್‌’ ಕಣದಿಂದ ಹಿಂದೆ ಸರಿದಿದ್ದು, ಸ್ಪರ್ಧೆಗಳ ಸಂಖ್ಯೆ ಎಂಟಕ್ಕೆ ಇಳಿದಿದೆ. ಅವುಗಳಲ್ಲಿ 6 ಗಂಡು ಮತ್ತು 2 ಹೆಣ್ಣು ಕುದುರೆಗಳು ಮಾತ್ರ
ಸ್ಪರ್ಧಿಸುತ್ತಿವೆ. ತನ್ನ ಎಲ್ಲಾ ಆರು ಓಟಗಳಲ್ಲಿ ಅಜೇಯವಾಗಿ ಉಳಿದಿರುವ ‘ವಾರ್‌ ಹ್ಯಾಮರ್‌’ ಅತ್ಯಂತ ಬಲಾಢ್ಯ ವಾಗಿ ಕಂಡುಬರುತ್ತಿದೆ. ಬೇಸಿಗೆಯ ‘ಕೋಲ್ಟ್‌ ಟ್ರಯಲ್‌ ಸ್ಟೇಕ್ಸ್‌’ ಮತ್ತು ಚಳಿಗಾಲದ ‘2000 ಗಿನ್ನೀಸ್‌’ನಲ್ಲಿ ಭರ್ಜರಿ ಜಯಗಳಿಸಿರುವ ಈ ಕುದು ರೆಯು ಡರ್ಬಿ ಗೆಲ್ಲುವ ಎಲ್ಲರ ನೆಚ್ಚಿನ ಫೇವರಿಟ್‌ ಎನಿಸಿದೆ.

ಟ್ರೇನರ್‌ ಪ್ರಸನ್ನ ಕುಮಾರ್‌ ತರಬೇತಿಯಲ್ಲಿ ಪಳಗಿರುವ ಈ ನಾಲ್ಕು ವರ್ಷದ ಕುದುರೆಯನ್ನು ನುರಿತ ಜಾಕಿ ಸೂರಜ್‌ ನರೇಡು ಸವಾರಿ ಮಾಡಲಿದ್ದಾರೆ.

ಏರ್‌ ಸಪೋರ್ಟ್‌– ಸೋವಿಯತ್‌ ಲೇಕ್‌ ಸಂತತಿಯ ಈ ಕುದುರೆಯು ಮೊದಲ ಬಾರಿಗೆ 2400 ಮೀಟರ್ಸ್‌ ದೂರದ ರೇಸ್‌ನಲ್ಲಿ ಓಡುತ್ತಿರುವ ಕಾರಣ, ಇದರ ಸಾಮರ್ಥ್ಯದ ಬಗ್ಗೆ ಕೆಲವರಲ್ಲಿ ತುಸು ಆತಂಕ ಮೂಡಿದೆ. ಆದರೆ,ಇತರ ಕುದುರೆಗಳಿಗೆ ಹೋಲಿಸಿದರೆ ‘ವಾರ್‌ ಹ್ಯಾಮರ್‌’ ಉತ್ತಮ ಫಿಟ್ನೆಸ್‌ ಹೊಂದಿದ್ದು ಡರ್ಬಿಯ 2400 ಮೀಟರ್ಸ್‌ ದೂರವನ್ನು ಕ್ರಮಿಸಿ ಜಯ ಗಳಿಸುವ ಸಾಮರ್ಥ್ಯವನ್ನು ಹೊಂದಿದೆ. ‘1000 ಗಿನ್ನೀಸ್‌’ ಮತ್ತು ‘ಬೆಂಗಳೂರು ಓಕ್ಸ್‌’ ಗೆದ್ದಿರುವ ‘ಅನೀಝ್‌’ ಎರಡನೇ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ಉಳಿದ ಸ್ಥಾನಗಳಿಗಾಗಿ ‘ಸ್ಪೀಡ್‌ ಸ್ಟರ್‌’, ‘ಅಲೆಕ್ಸಾಂಡರ್‌ ಬರ್ನ್ಸ್‌’, ‘ಹಿಯರ್‌ ಅಂಡ್‌ ನೌ’ಮತ್ತು ‘ರೋಮನ್‌ ಸೆನೆಟರ್‌’ ತೀವ್ರ ಪೈಪೋಟಿ ನಡೆಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT