ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಟ್‌ಲಿಫ್ಟಿಂಗ್: ರಾಖಿ ಹಲ್ದರ್‌ಗೆ ಎರಡು ದಾಖಲೆ

ಕತಾರ್ ಇಂಟರ್‌ನ್ಯಾಷನಲ್ ಕಪ್: 218 ಕೆಜೆ ಎತ್ತಿದ ಲಿಫ್ಟರ್
Last Updated 24 ಡಿಸೆಂಬರ್ 2019, 9:42 IST
ಅಕ್ಷರ ಗಾತ್ರ

ದೋಹಾ : ಭಾರತದ ರಾಖಿ ಹಲ್ದರ್ ಇಲ್ಲಿ ನಡೆದ ಕತಾರ್ ಇಂಟರ್‌ನ್ಯಾಷನಲ್ ಕಪ್ ವೇಟ್‌ಲಿಫ್ಟಿಂಗ್‌ನಲ್ಲಿ ಎರಡು ರಾಷ್ಟ್ರೀಯ ದಾಖಲೆಗಳೊಂದಿಗೆ ಕಂಚಿನ ಪದಕ ಗೆದ್ದುಕೊಂಡರು. ಮಹಿಳೆಯರ 64 ಕೆಜಿ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು.

ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದ ರಾಖಿ ಭಾನುವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಒಟ್ಟು 218 ಕೆಜಿ ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ 95 ಕೆಜಿ ಇತ್ತಿದ ಅವರು ಕ್ಲೀನ್‌ ಆ್ಯಂಡ್ ಜರ್ಕ್‌ನಲ್ಲಿ 123 ಕೆಜಿ ಸಾಧನೆ ಮಾಡಿದರು. ಸ್ನ್ಯಾಚ್‌ನಲ್ಲೂ ಒಟ್ಟು ಭಾರ ಎತ್ತುವುದರಲ್ಲೂ ರಾಷ್ಟ್ರೀಯ ದಾಖಲೆ ಮುರಿದರು. ಜೂನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ರಾಖಿ 214 ಕೆಜಿ (94+120) ಭಾರ ಎತ್ತಿದ್ದರು.

ಕತಾರ್ ಕಪ್‌, ಒಲಿಂಪಿಕ್ಸ್‌ಗೆ ರಹದಾರಿ ಪಡೆಯುವ ಅವಕಾಶ ಒದಗಿಸಿತ್ತು. ಮುಂದಿನ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಅಂತಿಮ ರ‍್ಯಾಂಕಿಂಗ್ ಪಟ್ಟಿಯನ್ನು ಸಿದ್ಧಗೊಳಿಸುವಾಗ ಇಲ್ಲಿ ಪಡೆದ ಪದಕಗಳು ಗಣನೆಗೆ ಬರಲಿವೆ.

ಭಾರತಕ್ಕೆ ಇಲ್ಲಿ ಮೂರು ಪದಕಗಳು ಲಭಿಸಿದವು. ಮಾಜಿ ವಿಶ್ವ ಚಾಂಪಿಯನ್‌ ಮೀರಾಬಾಯಿ ಚಾನು ಮೊದಲ ದಿನ ಚಿನ್ನ ಗೆದ್ದಿದ್ದರೆ ಯುವ ಲಿಫ್ಟರ್ ಜೆರೆಮಿ ಲಾಲ್‌ರಿನ್ನುಂಗ ದಾಖಲೆಗಳೊಂದಿಗೆ ಬೆಳ್ಳಿಯ ಪದಕ ಗಳಿಸಿದ್ದರು.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬೇಕಾದರೆ 2018ರ ನವೆಂಬರ್‌ನಿಂದ 2020ರ ಏಪ್ರಿಲ್ ವರೆಗಿನ ಅವಧಿಯಲ್ಲಿ ಪ್ರತಿ ವೇಟ್‌ಲಿಫ್ಟರ್ ಕನಿಷ್ಠ ಒಂದು, ಒಟ್ಟಾರೆ ಆರು ಸ್ಪರ್ಧೆಗಳಲ್ಲಿ ಸ್ಪ‍ರ್ಧೆಯಲ್ಲಿ ಪಾಲ್ಗೊಂಡಿರಬೇಕು ಮತ್ತು ಕನಿಷ್ಠ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗಳಿಸಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT