ಅರ್ಜೆಂಟೀನಾಕ್ಕೆ ತೆರಳಿದ ಮಹಿಳಾ ಹಾಕಿ ತಂಡ

ನವದೆಹಲಿ: ರಾಣಿ ರಾಂಪಾಲ್ ನೇತೃತ್ವದ ಭಾರತ ಮಹಿಳಾ ಹಾಕಿ ತಂಡವು ನಾಲ್ಕು ಪಂದ್ಯಗಳ ಸರಣಿಯನ್ನು ಆಡಲು ಭಾನುವಾರ ಅರ್ಜೆಂಟೀನಾಕ್ಕೆ ತೆರಳಿತು. ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಉಂಟಾದ ಸುಮಾರು ಒಂದು ವರ್ಷದ ಬಿಡುವಿನ ಬಳಿಕ ಭಾರತ ತಂಡ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿದೆ.
ಕೋವಿಡ್ ಬಿಡುವಿನ ವೇಳೆಯಲ್ಲಿ ಮಹಿಳಾ ಹಾಕಿ ತಂಡವು ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್) ನಡೆದ ರಾಷ್ಟ್ರೀಯ ಶಿಬಿರದಲ್ಲಿ ತರಬೇತಿ ನಡೆಸಿತ್ತು.
ಭಾರತ ಮಹಿಳಾ ತಂಡವು ವಿಶ್ವದ ಎರಡನೇ ರ್ಯಾಂಕಿನ ತಂಡ ಅರ್ಜೆಂಟೀನಾ ವಿರುದ್ಧ ಜನೆವರಿ 26, 28, 30 ಹಾಗೂ 31ರಂದು ಪಂದ್ಯಗಳನ್ನು ಆಡಲಿದೆ. ಅದಕ್ಕೂ ಮೊದಲು ಅರ್ಜೆಂಟೀನಾ ಬಿ ಹಾಗೂ ಜೂನಿಯರ್ ತಂಡಗಳ ಎದುರು ಭಾರತ ತಲಾ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.
‘ಮತ್ತೆ ಅಂತರರಾಷ್ಟ್ರೀಯ ಪ್ರವಾಸ ಕೈಗೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಪಂದ್ಯದ ಕೌಶಲಗಳ ಕುರಿತು ತರಬೇತಿ ನಡೆಸಿದ್ದು, ಅರ್ಜೆಂಟೀನಾ ಎದುರಿನ ಪಂದ್ಯಗಳಲ್ಲಿ ಅದನ್ನು ಅಳವಡಿಸಿಕೊಳ್ಳಲಿದ್ದೇವೆ‘ ಎಂದು ರಾಣಿ ರಾಂಪಾಲ್ ಹೇಳಿದ್ದಾರೆ.
ಅರ್ಜೆಂಟೀನಾಕ್ಕೆ ತೆರಳುವ 72 ಗಂಟೆಗಳ ಮೊದಲು ಇಂಡೀ ತಂಡಕ್ಕೆ ಕೋವಿಡ್–19 ಪರೀಕ್ಷೆ ನಡೆಸಲಾಯಿತು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.