ಬುಧವಾರ, ಏಪ್ರಿಲ್ 8, 2020
19 °C
ರಾಷ್ಟ್ರೀಯ ಕೊಕ್ಕೊ ಚಾಂಪಿಯನ್‌ಷಿಪ್‌

ಕೊಕ್ಕೊ: ಪ್ರೀ ಕ್ವಾರ್ಟರ್‌ಗೆ ಕರ್ನಾಟಕ ತಂಡಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಮೆತರಾ, ಛತ್ತೀಸಗಡ: ಕರ್ನಾಟಕದ ಪುರುಷ ಹಾಗೂ ಮಹಿಳಾ ತಂಡಗಳು ರಾಷ್ಟ್ರೀಯ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ  ಪ್ರೀಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟವು.

ಇಲ್ಲಿನ ಅಲ್ಲೊನ್ಸ್ ಪಬ್ಲಿಕ್‌ ಸ್ಕೂಲ್‌ ಮೈದಾನದಲ್ಲಿ ನಡೆದ ‘ಎಫ್‌’ ಗುಂಪಿನ ಹಣಾಹಣಿಯಲ್ಲಿ ಕರ್ನಾಟಕ ಪುರುಷರ ತಂಡವು 13–10ರಿಂದ ಪಂಜಾಬ್‌ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಗೌತಮ್‌ ಎಂ.ಕೆ. ಹಾಗೂ ದಿಲೀಪ್‌ ಉತ್ತಮ ಆಟವಾಡಿದರು.

ಮಹಿಳಾ ವಿಭಾಗದ ‘ಜಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವು ಉತ್ತರ ಪ್ರದೇಶ ಎದುರು 8–3ರಿಂದ ಜಯ ಸಾಧಿಸಿತು. ತೇಜಸ್ವಿನಿ ಕೆ. ಹಾಗೂ ಚಿತ್ರಾ ಬಿ. ಅವರು ತಂಡದ ಜಯದಲ್ಲಿ ಮಿಂಚಿದರು.

ಮಹಾರಾಷ್ಟ್ರದ ಮಹಿಳಾ ಮತ್ತು ಪುರುಷರ ತಂಡಗಳೂ 16ರ ಘಟ್ಟ ತಲುಪಿದವು. ಪುರುಷರ ತಂಡವು ದೆಹಲಿ ತಂಡವನ್ನು 19–3ರಿಂದ ಪರಾಭವಗೊಳಿಸಿದರೆ ಮಹಿಳಾ ತಂಡವು ಚಂಡೀಗಡ ಎದುರು 14–7ರಿಂದ ಗೆದ್ದಿತು. ಹೋದ ಆವೃತ್ತಿಯಲ್ಲಿ ರಾಜ್ಯದ ಪುರುಷ ಹಾಗೂ ಮಹಿಳಾ ತಂಡಗಳು ಕ್ರಮವಾಗಿ ಆರು ಮತ್ತು ಏಳನೇ ಸ್ಥಾನ ಗಳಿಸಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು