ಶುಕ್ರವಾರ, ಜನವರಿ 28, 2022
25 °C

ಒಲಿಂಪಿಕ್ಸ್ ಶೂಟಿಂಗ್‌: ಏಷ್ಯಾಕ್ಕೆ ಕಾಯ್ದಿರಿಸಿದ ಸ್ಥಾನಗಳಲ್ಲಿ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ ಕ್ರೀಡೆಯ ಅರ್ಹತೆಗಾಗಿ ಏಷ್ಯಾದ ದೇಶಗಳಿಗೆ ಕಾಯ್ದಿರಿಸಿದ್ದ ಸ್ಥಾನಗಳನ್ನು ಅಂತರರಾಷ್ಟ್ರೀಯ ಶೂಟಿಂಗ್ ಫೆಡರೇಷನ್‌ (ಐಎಸ್‌ಎಸ್‌ಎಫ್‌) 38ರಿಂದ 48ಕ್ಕೆ ಹೆಚ್ಚಿಸಿದೆ.

2024ರ ಪ‍್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇದು ಜಾರಿಗೆ ಬರುವ ನಿರೀಕ್ಷೆಯಿದೆ. 2022ರಿಂದಲೇ ಅರ್ಹತಾ ಸ್ಪರ್ಧೆಗಳು ಆರಂಭವಾಗಲಿವೆ. ಟೋಕಿಯೊ ಕೂಟದಲ್ಲಿ 38 ಸ್ಥಾನಗಳಿದ್ದವು.

‘ಏಷ್ಯಾಕ್ಕೆ ಕಾಯ್ದಿರಿಸಿದ ಸ್ಥಾನಗಳನ್ನು 38ರಿಂದ 48ಕ್ಕೆ ಹೆಚ್ಚಿಸಲಾಗಿದೆ ಎಂದು ದೃಢೀಕರಿಸುವ ಪತ್ರವನ್ ಐಎಸ್‌ಎಸ್‌ಎಫ್‌ನಿಂದ ಏಷ್ಯನ್ ಶೂಟಿಂಗ್ ಕಾನ್ಫೆಡರೇಷನ್‌ (ಎಎಸ್‌ಸಿ) ಸ್ವೀಕರಿಸಿದೆ‘ ಎಂದು ಎಎಸ್‌ಸಿಯು ಟ್ವಿಟರ್ ಮತ್ತು ಫೇಸ್‌ಬುಕ್‌ ಮಾಹಿತಿ ನೀಡಿದೆ.      

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ದಾಖಲೆಯ 15 ಶೂಟರ್‌ಗಳು ಅರ್ಹತೆ ಗಿಟ್ಟಿಸಿದ್ದರು. ಆದರೆ ಒಂದು ಪದಕವೂ ದಕ್ಕಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು