ಶನಿವಾರ, ಸೆಪ್ಟೆಂಬರ್ 21, 2019
21 °C
ಶಾಟ್‌ಗನ್‌ ವಿಶ್ವಕಪ್‌ ಟೂರ್ನಿ

ಶಾಟ್‌ಗನ್‌: ಮುನ್ನಡೆಯಲ್ಲಿ ಕಿನನ್‌, ಪೃಥ್ವಿರಾಜ್‌

Published:
Updated:

ಚಾಂಗ್ವಾನ್‌ (ಪಿಟಿಐ): ಭಾರತದ ಶೂಟಿಂಗ್‌ ತಾರೆಗಳಾದ ಪೃಥ್ವಿರಾಜ್‌ ತೊಂಡೈಮನ್‌ ಹಾಗೂ ಕಿನನ್‌ ಚೆನಾಯ್‌ ಶಾಟ್‌ಗನ್‌ ವಿಶ್ವಕಪ್‌ನಲ್ಲಿ ಮಿಂಚು ಹರಿಸಿದ್ದಾರೆ.

ಪುರುಷರ ಟ್ರ್ಯಾಪ್‌ ಶೂಟಿಂಗ್‌ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 25 ಅಂಕಗಳ ಎರಡು ಸುತ್ತಗಳಲ್ಲಿ ‍ಉಭಯ ಸ್ಪರ್ಧಿಗಳು ಪೂರ್ಣ ಅಂಕಗಳಿಗೆ ಗುರಿಯಿಟ್ಟರು. ಈ ಮೂಲಕ 109 ಸ್ಪರ್ಧಿಗಳಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.ಇನ್ನು ಮೂರು ಸುತ್ತುಗಳು ಬಾಕಿ ಇವೆ. ಗುರುವಾರ ನಡೆಯುವ ಸ್ಪರ್ಧೆಗಳಲ್ಲಿ ಅಗ್ರ ಆರು ಸ್ಥಾನ ಪಡೆದವರು ಫೈನಲ್‌ಗೆ ಸ್ಥಾನ ಖಚಿತಪಡಿಸುವರು.

Post Comments (+)