ಸ್ಪೇನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ ಎರಡನೇ ಸುತ್ತಿಗೆ ಸೌರಭ್‌, ಕಶ್ಯಪ್‌

ಶುಕ್ರವಾರ, ಮೇ 24, 2019
28 °C

ಸ್ಪೇನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ ಎರಡನೇ ಸುತ್ತಿಗೆ ಸೌರಭ್‌, ಕಶ್ಯಪ್‌

Published:
Updated:
Prajavani

ಬಾರ್ಸಿಲೋನಾ: ಭಾರತದ ಸೌರಭ್‌ ವರ್ಮಾ, ಪರುಪ್ಪಳ್ಳಿ ಕಶ್ಯಪ್‌ ಮತ್ತು ಅಜಯ್‌ ಜಯರಾಮ್‌ ಸ್ಪೇನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದರು. 

ಬುಧವಾರ ನಡೆದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಸೌರಭ್‌ 21–15, 21–16 ರಿಂದ ಸ್ಪೇನ್‌ನ ಲೂಯಿಸ್‌ ಎನ್ರಿಕ್ ಪೆನಲ್ವರ್‌ ಅವರನ್ನು ಮಣಿಸಿದರು. ಈ ಹಣಾಹಣಿಯು 33 ನಿಮಿಷಗಳ ಕಾಲ ನಡೆಯಿತು. 

ಮುಂದಿನ ಸುತ್ತಿನಲ್ಲಿ ಸೌರಭ್, ಬ್ರೆಜಿಲ್‌ನ ಯಗರ್‌ ಕೊಲ್ಹೊ ಅಥವಾ ಚೀನಾದ ರೆನ್‌ ಪೆನ್ಗೊ ಅವರನ್ನು ಸೆಣೆಸಲಿದ್ದಾರೆ. 

ಕಶ್ಯಪ್‌, ನೇರ ಸೆಟ್‌ಗಳಿಂದ ಹಾಂಗ್‌ಕಾಂಗ್‌ನ ವಾಂಗ್‌ ವಿಂಗ್‌ ಕೀ ವಿನ್ಸೆಂಟ್ ಅವರನ್ನು ಸೋಲಿಸಿದರು. 53 ನಿಮಿಷಗಳ ಕಾಲ ನಡೆದ ಪೈಪೋಟಿಯಲ್ಲಿ ಭಾರತದ ಆಟಗಾರ 27–25, 21–18 ರಿಂದ ವಿಂಗ್‌ ಕೀ ಅವರನ್ನು ಪರಾಭವಗೊಳಿಸಿದರು. 

ಇದೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಅಜಯ್‌ ಜಯರಾಮ್‌ 18–21, 21–16, 21–17 ರಿಂದ ಮಲೇಷ್ಯಾದ ಚೀಮ್‌ ಜೂನ್‌ ವೀ ಅವರನ್ನು ಮಣಿಸಿದರು. 

ಎರಡನೇ ಸುತ್ತಿನಲ್ಲಿ ಅಜಯ್‌ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್‌ಸೆನ್‌ ಅವರನ್ನು ಎದುರಿಸಲಿದ್ದಾರೆ. ಹಾಗೆಯೇ ಕಶ್ಯಪ್‌ ಅವರು ದೇನ್‌ ಜಾನ್‌ ಒ ಜಾರ್ಗನ್‌ಸನ್‌ ಅವರನ್ನು ಎದುರಿಸಲಿದ್ದಾರೆ.

ಮುಗ್ದಾಗೆ ಗೆಲುವು: ಮಹಿಳೆಯರ ಸಿಂಗಲ್ಸ್‌ನಲ್ಲಿ ಮುಗ್ದಾ ಅಗ್ರೇಯ್‌ ಅವರು ನೇರ ಸೆಟ್‌ಗಳಿಂದ ನೆದರ್ಲೆಂಡ್ಸ್‌ನ ಸೊರಾಯ ಡೆ ವಿಚ್‌ ಐ ಜನ್‌ ಬರ್ನ್‌ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

ಮುಗ್ದಾ,  21–19, 21–16 ರಿಂದ ಸೊರಾಯ ಅವರನ್ನು ಮಣಿಸಿದರು. 

ಪುರುಷರ ಡಬಲ್ಸ್‌ನಲ್ಲಿ ಕೃಷ್ಣ ಪ್ರಸಾದ್‌ ಗರಗ ಮತ್ತು ಧ್ರುವ ಕಪಿಲ್ ಜೋಡಿಯು 21–19, 21–19 ರಿಂದ ಫ್ರಾನ್ಸ್‌ನ ಕ್ರಿಸ್ಟೊ ಪೊಪೊವ್‌ ಮತ್ತು ಟಾಮ ಜೂನಿಯರ್ ಪೊಪೊವ್‌ ಅವರನ್ನು ಸೋಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !