ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ವಲಯ ಈಜು: ಕರ್ನಾಟಕ ತಂಡ ಸಮಗ್ರ ಚಾಂಪಿಯನ್‌

ರಾಜ್ಯದ ಧ್ಯಾನ್‌, ನೈಷಾ, ಅದಿತಿ ಶ್ರೇಷ್ಠ ಈಜುಪಟುಗಳು
Last Updated 29 ಡಿಸೆಂಬರ್ 2022, 14:53 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೇಷ್ಠ ಸಾಮರ್ಥ್ಯ ತೋರಿದ ಕರ್ನಾಟಕದ ಈಜುಪಟುಗಳು ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದರು.

ಕೇರಳದ ತಿರುವನಂತಪುರದ ಡಾ. ಬಿ.ಆರ್. ಅಂಬೇಡ್ಕರ್ ಅಂತರರಾಷ್ಟ್ರೀಯ ಈಜು ಕಾಂಪ್ಲೆಕ್ಸ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಕೊನೆಯ ದಿನವಾದ ಗುರುವಾರ ರಾಜ್ಯದ ಈಜುಪಟುಗಳಿಂದ ಏಳು ಕೂಟ ದಾಖಲೆಗಳು ನಿರ್ಮಾಣವಾದವು.

ಒಟ್ಟು 1,047 ಪಾಯಿಂಟ್ಸ್ ಕಲೆಹಾಕಿದ ಕರ್ನಾಟಕ ಸಮಗ್ರ ಚಾಂಪಿಯನ್ ಎನಿಸಿಕೊಂಡಿತು. ತಮಿಳುನಾಡು ಮತ್ತು ಕೇರಳ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದವು. ವಾಟರ್‌ಪೋಲೊದಲ್ಲಿ ಕರ್ನಾಟಕ ಎರಡನೇ ಸ್ಥಾನ ಗಳಿಸಿತು.

ಕರ್ನಾಟಕದ ಧ್ಯಾನ್ ಎಂ. ಬಾಲಕರ ವಿಭಾಗದ ಶ್ರೇಷ್ಠ ಈಜುಪಟು ಎನಿಸಿಕೊಂಡರೆ, ಬಾಲಕಿಯರ ವಿಭಾಗದಲ್ಲಿ ರಾಜ್ಯದ ನೈಷಾ ಶೆಟ್ಟಿ, ಅದಿತಿ ಎನ್‌. ಮುಲಾಯ್ ಜಂಟಿಯಾಗಿ ಈ ಗೌರವ ಗಳಿಸಿದರು.

ಮೂರನೇ ದಿನದ ಫಲಿತಾಂಶಗಳು (ಕರ್ನಾಟಕ ಮಾತ್ರ): ಬಾಲಕರು: 400 ಮೀ. ಫ್ರೀಸ್ಟೈಲ್‌: ಗುಂಪು 1: ಸಂಜೀತ್ ಜೆ.–2, ಪವನ್ ಧನಂಜಯ್–3. ಗುಂಪು 2: ರೇಣುಕಾಚಾರ್ಯ ಎ.–2, ದಕ್ಷಣ್ ಎಸ್‌–3.

100 ಮೀ. ಬ್ರೆಸ್ಟ್‌ಸ್ಟ್ರೋಕ್‌: ಗುಂಪು 1: ಸೂರ್ಯ ಜೋಯಪ್ಪ–2, ಬಾಸಿತ್ ಅಹಮದ್‌–3. ಗುಂಪು 2: ವಿಷಾಗ್ನ ಸರವಣನ್‌–2. ಗುಂಪು 3: ಅಥರ್ವ್ ಪಾಲ್ ಸಿಂಗ್‌–1 (ಕಾಲ: 1 ನಿ. 25.64 ಸೆ.), ವೈಭವ್ ಪ್ರತಾಪ್‌–2

50 ಮೀ. ಬ್ಯಾಕ್‌ ಸ್ಟ್ರೋಕ್‌: ಗುಂಪು 1: ಧ್ಯಾನ್ ಎಂ.–1 (ಕೂಟ ದಾಖಲೆ, ಕಾಲ: 27.88 ಸೆ.), ಆಕಾಶ್ ಮಣಿ–2. ಗುಂಪು 2: ಅಮನ್ ಸುಣಗಾರ–2, ಸೂರ್ಯ ಜೆ.ಟಿ–3. ಗುಂಪು 3: ಅದ್ವೈತ್‌ ವಿ.ಎಂ.–2

200 ಮೀ. ಬಟರ್‌ಫ್ಲೈ ಸ್ಟ್ರೋಕ್‌: ಗುಂಪು 1: ನೀಲೇಶ್ ದಾಸ್‌–2, ಶ್ರೇಯಸ್‌ ವೆಂಕಟೇಶ್–3. ಗುಂಪು 2: ಅಕ್ಷಜ್ ಠಾಕೂರಿಯಾ–1 (ಕಾಲ: 2 ನಿ. 18.76 ಸೆ.), ಆರ್ಯನ್ ಪಟೇಲ್‌–2

400 ಮೀ. ವೈಯಕ್ತಿಕ ಮೆಡ್ಲೆ: ಗುಂಪು 1: ಪವನ್ ಧನಂಜಯ್‌–1 (ಕೂಟ ದಾಖಲೆ, ಕಾಲ: 4 ನಿ.50.21 ಸೆ.)

100 ಮೀ. ಫ್ರೀಸ್ಟೈಲ್‌: ಗುಂಪು 1: ತರುಣ್ ಅರುಣ್ ಗೌಡ–1 (ಕೂಟ ದಾಖಲೆ, ಕಾಲ: 54.62 ಸೆ.), ಧ್ಯಾನ್ ಎಂ.–2. ಗುಂಪು 2: ರೇಣುಕಾಚಾರ್ಯ–2, ಅಕ್ಷಜ್ ಠಾಕೂರಿಯಾ–3. ಗುಂಪು 3: ಕೃಷ್ಣ ನಂದಕುಮಾರ್–2, ಎಸ್‌. ಕೃಷ್‌–3

ಬಾಲಕಿಯರು: 1500 ಮೀಟರ್ಸ್ ಫ್ರೀಸ್ಟೈಲ್‌: ಗುಂಪು 1: ಅದಿತಿ ಎನ್. ಮುಲಾಯ್‌–1 (ಕೂಟ ದಾಖಲೆ, ಕಾಲ:19 ನಿ. 1.16 ಸೆಕೆಂಡು), ಸಿಂಥಿಯಾ ಚೌಧುರಿ–2. ಗುಂಪು 2: ಶ್ರೀಚರಣಿ ತುಮು–1, (ಕಾಲ: 18 ನಿ. 53.99 ಸೆ.) ತನಿಶಾ ವಿನಯ್‌–2.

100 ಮೀ. ಬ್ರೆಸ್ಟ್‌ಸ್ಟ್ರೋಕ್‌: ಗುಂಪು 1: ಹಿತೈಷಿ ವಿ.–2, ಮೇಘಾಂಜಲಿ–3. ಗುಂಪು 2: ತಾನ್ಯಾ ಎಸ್‌–1 (ಕಾಲ: 1 ನಿ. 20.8ಸೆ.), ರಿಯಾನ್ನಾ ಧರಿತಿ–2. ಗುಂಪು 3: ಸ್ಪರ್ಷಾ ಹರೀಶ–3

50 ಮೀ. ಬ್ಯಾಕ್‌ಸ್ಟ್ರೋಕ್‌: ಗುಂಪು 1: ಆರುಷಿ ಅಗರವಾಲ್‌–1 (ಕೂಟ ದಾಖಲೆ, ಕಾಲ: 31.72 ಸೆ.), ನೈಷಾ ಶೆಟ್ಟಿ–2. ಗುಂಪು 2: ನಕ್ಷತ್ರ ಗೌತಮ್–2

200 ಮೀ. ಬಟರ್‌ಫ್ಲೈ ಸ್ಟ್ರೋಕ್‌: ಗುಂಪು 1: ಸಿಂಥಿಯಾ ಚೌಧುರಿ–1 (ಕಾಲ: 2 ನಿ. 35.77 ಸೆ.), ಅದಿತಿ ಮುಲಾಯ್–2. ಗುಂಪು 2: ಸುಹಾಸಿನಿ ಘೋಷ್‌–1 (ಕೂಟ ದಾಖಲೆ, ಕಾಲ: 2 ನಿ. 28.80 ಸೆ.), ತನಿಶಾ ವಿನಯ್‌–2

400 ಮೀ. ವೈಯಕ್ತಿಕ ಮೆಡ್ಲೆ: ಗುಂಪು 1: ಅನ್ಶು ದೇಶಪಾಂಡೆ–1 (ಕಾಲ: 5 ನಿ. 35.84 ಸೆ.). ಗುಂಪು 2: ತಾನ್ಯಾ ಎಸ್‌.–1 (ಕೂಟ ದಾಖಲೆ, ಕಾಲ:5 ನಿ. 26. 16 ಸೆ.), ಸಬಾ ಸುಹಾನಾ–2.

100 ಮೀ. ಫ್ರೀಸ್ಟೈಲ್‌: ಗುಂಪು 1: ಲಕ್ಷ್ಮಿ ತ್ರಿವಿಕ್ರಮ್–1 (ಕಾಲ: 1 ನಿ. 2.4 ಸೆ.), ಸಾಕ್ಷಿ ಧ್ಯಾಮನ್ನವರ್–3. ಗುಂಪು 2: ಆರ್ನಾ ಎಂ.ಪಿ.–1 (ಕಾಲ: 1 ನಿ.2.74 ಸೆ.), ತಿಶ್ಯಾ ಸೋನಾರ್–2. ಗುಂಪು 3: ಮೀರಾ ನಂಬಿಯಾರ್–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT