ಮಂಗಳವಾರ, ಸೆಪ್ಟೆಂಬರ್ 17, 2019
21 °C
ಐತಿಹಾಸಿಕ ಜಯದ ಸನಿಹ ಅಫ್ಗಾನ್‌

ಅಫ್ಗನ್‌ ಸ್ಪಿನ್‌ ಬಲೆಯಲ್ಲಿ ಬಾಂಗ್ಲಾ ಹುಲಿಗಳು

Published:
Updated:
Prajavani

ಚಿತ್ತಗಾಂಗ್‌, ಬಾಂಗ್ಲಾದೇಶ: ಸ್ಪಿನ್ನರ್‌ಗಳಾದ ರಶೀದ್‌ ಖಾನ್‌ ಹಾಗೂ ಜಹೀರ್‌ ಖಾನ್‌ ಬೌಲಿಂಗ್‌ ಬಲದಿಂದ ಅಫ್ಗಾನಿಸ್ತಾನ ಕ್ರಿಕೆಟ್‌ ತಂಡ, ಬಾಂಗ್ಲಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಜಯದತ್ತ ಮುಖ ಮಾಡಿತ್ತು.

398 ರನ್‌ಗಳ ಗುರಿ ಬೆನ್ನತ್ತಿರುವ ಆತಿಥೇಯರು ನಾಲ್ಕನೇ ದಿನವಾದ ಭಾನುವಾರ 6 ವಿಕೆಟ್‌ ಕಳೆದುಕೊಂಡು 136 ರನ್‌ ಗಳಿಸಿದ್ದರು. ಬಾಂಗ್ಲಾ ಗೆಲುವಿಗೆ ಇನ್ನೂ 262 ರನ್‌ ಬೇಕು. ಪ್ರವಾಸಿ ತಂಡದ ನಾಯಕ ರಶೀದ್‌ ಖಾನ್‌ (46ಕ್ಕೆ 3) ಹಾಗೂ ಎಡಗೈ ಬೌಲರ್‌ ಜಹೀರ್‌ (36ಕ್ಕೆ 2) ಬಾಂಗ್ಲಾದ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು.

ನಾಯಕ ಶಕೀಬ್‌ ಅಲ್‌ ಹಸನ್‌ (ಬ್ಯಾಟಿಂಗ್‌ 39) ಹಾಗೂ ಸೌಮ್ಯ ಸರ್ಕಾರ್‌ (ಬ್ಯಾಟಿಂಗ್‌ 0) ಐದನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಶಾದ್ಮನ್‌ ಇಸ್ಲಾಂ (41) ಹಾಗೂ ವಿಕೆಟ್‌ ಕೀಪರ್‌ ಮುಶ್ಫೀಕುರ್ ರಹೀಂ (23) ಅಫ್ಗಾನ್‌ ಬೌಲರ್‌ಗಳಿಗೆ ಅಲ್ಪ ಪ್ರತಿರೋಧ ತೋರಿದರು.   ಅಫ್ಗಾನಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ 260 ರನ್‌ಗೆ ಆಲೌಟ್‌ ಆಯಿತು.

ಸಂಕ್ಷಿಪ್ತ ಸ್ಕೋರು: ಅಫ್ಗಾನಿಸ್ತಾನ 342 ಮತ್ತು 260. ಬಾಂಗ್ಲಾದೇಶ 205 ಮತ್ತು 44.2 ಓವರ್‌ಗಳಲ್ಲಿ 6 ವಿಕೆಟ್‌ಗೆ 136 (ಶಾದ್ಮನ್‌ ಇಸ್ಲಾಂ 41, ಶಕೀಬ್‌ ಅಲ್‌ ಹಸನ್‌ ಬ್ಯಾಟಿಂಗ್‌ 39, ಮುಶ್ಫೀಕುರ್ ರಹೀಂ 23; ರಶೀದ್‌ ಖಾನ್‌ 46ಕ್ಕೆ 3, ಜಹೀರ್‌ 36ಕ್ಕೆ 2).

Post Comments (+)