ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಆಳ್ವಾಸ್‌ ತಂಡಕ್ಕೆ ಸಮಗ್ರ ಪ್ರಶಸ್ತಿ

Last Updated 28 ಆಗಸ್ಟ್ 2022, 21:17 IST
ಅಕ್ಷರ ಗಾತ್ರ

ಬೆಂಗಳೂರು: ಮೂಡುಬಿದಿರೆಯ ಆಳ್ವಾಸ್‌ ತಂಡದವರು ಭಾನುವಾರ ಇಲ್ಲಿ ಕೊನೆಗೊಂಡ ರಾಜ್ಯ ಜೂನಿಯರ್‌ ಮತ್ತು ಸೀನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು.

20 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗ, 23 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ವಿಭಾಗ, ಪುರುಷರ ಮತ್ತು ಮಹಿಳೆಯರ ವಿಭಾಗ ಹಾಗೂ ಬಾಲಕರ 14 ವರ್ಷದೊಳಗಿನವರ ವಿಭಾಗಗಳಲ್ಲಿ ಆಳ್ವಾಸ್‌ ತಂಡ ಚಾಂಪಿಯನ್‌ ಆಯಿತು.

ಬಾಲಕಿಯರ 14 ಮತ್ತು 16 ವರ್ಷದೊಳಗಿನವರ ವಿಭಾಗಗಳಲ್ಲಿ ಬಿಎಸ್‌ಸಿ ತಂಡ, ಬಾಲಕರ 16 ವರ್ಷದೊಳಗಿನ ವಿಭಾಗದಲ್ಲಿ ಉಡುಪಿ ಹಾಗೂ ಬಾಲಕರ 18 ವರ್ಷದೊಳಗಿನವರ ವಿಭಾಗದಲ್ಲಿ ಡಿವೈಇಎಸ್‌ ತಂಡದವರು ಚಾಂಪಿಯನ್‌ ಆದರು.

ಶ್ರೇಷ್ಠ ಅಥ್ಲೀಟ್‌ ಪ್ರಶಸ್ತಿ: ಬಾಲಕರ ವಿಭಾಗ: 14 ವರ್ಷ (ದೀಪೇಶ್‌, ಉಡುಪಿ), 16 ವರ್ಷ: ಹಶ್ಮಿತ್‌ (ದಕ್ಷಿಣ ಕನ್ನಡ), 18 ವರ್ಷ: ಡಿ.ರೋಹನ್‌ (ಡಿವೈಇಎಸ್‌), 20 ವರ್ಷ: ಸಿ.ಎಚ್‌.ರಿಯಾನ್ (ಸಾಯ್), ಪುರುಷರ 23 ವರ್ಷ: ಅಭಿನ್‌ ಬಿ ದೇವಾಡಿಗ (ಉಡುಪಿ), ಪುರುಷರ ವಿಭಾಗ: ಸಿ.ಕೆ.ಮಿಜೊ (ಆಳ್ವಾಸ್‌)

ಬಾಲಕಿಯರ ವಿಭಾಗ: 14 ವರ್ಷ: ಎಚ್‌.ತ್ರಿಷಾ (ದಕ್ಷಿಣ ಕನ್ನಡ), 16 ವರ್ಷ: ಎಸ್‌.ಬಿ.ಸನಿಕಾ (ಉಡುಪಿ), 18 ವರ್ಷ: ನಿಯೊಲಿಕ (ಬಾಲಧನ ಕ್ಲಬ್‌), 20 ವರ್ಷ: ಕೀರ್ತನಾ (ಉಡುಪಿ), ಮಹಿಳೆಯರ 23 ವರ್ಷ: ಸಿಂಚನಾ ಕಾವೇರಮ್ಮ (ಫ್ಯೂಷನ್‌), ಮಹಿಳೆಯರ ವಿಭಾಗ: ಎಸ್‌.ಎಸ್‌.ಸ್ನೇಹಾ (ಆಳ್ವಾಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT