ಬುಧವಾರ, ಜೂನ್ 29, 2022
25 °C
3ನೇ ದಿನವೂ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ರಿಧಿಮಾ: ಬೆಳಗಿದ ವಿಹಿಥಾ, ಹಾಷಿಕಾ, ಧೀನಿಧಿ

ರಾಜ್ಯ ಈಜು ಕೂಟ: ನಾಲ್ಕು ದಾಖಲೆ

ಇಮಾಮ್‌ಹುಸೇನ್‌ ಗೂಡುನವರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ವಿಹಿಥಾ ನಯನಾ, ರಿಧಿಮಾ ವೀರೇಂದ್ರಕುಮಾರ, ಹಾಷಿಕಾ ರಾಮಚಂದ್ರ, ಧೀನಿಧಿ ದೇಸಿಂಗು ಅವರು ರಾಜ್ಯ ಈಜು ಸಂಸ್ಥೆ, ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಸಹಯೋಗದಲ್ಲಿ ಇಲ್ಲಿನ ಸುವರ್ಣ ಜೆಎನ್‌ಎಂಸಿ ಕೊಳದಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ದಾಖಲೆ ಬರೆದರು.

4x100 ಮೆಡ್ಲೆಯಲ್ಲಿ ಬಸವನಗುಡಿ ಈಜು ಕೇಂದ್ರದ ‘ಎ’ ತಂಡ (4:39.05ಸೆ.), ಕೆಎಆರ್‌ ತಂಡದ (4:32.69ಸೆ.) ಹೆಸರಿನಲ್ಲಿದ್ದ ದಾಖಲೆ ಮುರಿಯಿತು. ಬಾಲಕಿಯರ (ಜೂನಿಯರ್‌ ಗುಂಪು–2) 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಬಸವನಗುಡಿ ಈಜು ಕೇಂದ್ರದ ವಿಹಿಥಾ (34.96ಸೆ.), ಆಲಿಯಾಯ್‌ ಸಿಂಗ್‌ (35.41ಸೆ.) ಅವರ ದಾಖಲೆ ಮುರಿದರು. (ಜೂನಿಯರ್‌ ಗುಂಪು–1) 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಬಸವನಗುಡಿ ಈಜು ಕೇಂದ್ರದ ರಿಧಿಮಾ (2:25.21ಸೆ.), ಮಾನಾ ಪಟೇಲ್‌ (2:21.14ಸೆ.) ಅವರ ದಾಖಲೆ ಮುರಿದರು. ಈ ಮೂಲಕ 3ನೇ ದಿನವೂ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಬಾಲಕಿಯರ (ಜೂನಿಯರ್‌ ಗುಂಪು–2) 100 ಮೀ. ಫ್ರೀಸ್ಟೈಲ್‌ನಲ್ಲಿ ಡಾಲ್ಫಿನ್‌ ಈಜುಕೇಂದ್ರದ ಧೀನಿಧಿ ದೇಸಿಂಗು (59.64ಸೆ.), ಮಾನಾ ಪಟೇಲ್‌ (59.12ಸೆ.) ಅವರ ದಾಖಲೆ ಹಿಂದಿಕ್ಕಿದರು.

ನಾಲ್ಕನೇ ದಿನದ ಫಲಿತಾಂಶಗಳು
ಬಾಲ ಕರ ವಿಭಾಗ(ಜೂನಿಯರ್‌)
ಗುಂಪು–1ರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌
: ವಿದಿಥ್‌ ಶಂಕರ(ಡಾಲ್ಫಿನ್‌ ಈಜು ಕೇಂದ್ರ;30.65ಸೆ)–1, ಆದಿಥ್‌ ಓಲೇಟಿ(31.70ಸೆ.)–2, ಶುಭಾಂಗ ಕುಬೇರ್‌(ಇಬ್ಬರೂ ಬಸವನಗುಡಿ ಈಜು ಕೇಂದ್ರ;32.10ಸೆ.)–3

ಗುಂಪು–2ರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಆರ್‌.ನವನೀತ ಗೌಡ(ಡಾಲ್ಫಿನ್‌ ಈಜು ಕೇಂದ್ರ;34.02ಸೆ.)–1, ದಕ್ಷ ಎಂ.(34.66ಸೆ.)–2, ಸಪ್ತಶ್ವ ಬ್ಯಾನರ್ಜಿ(ಇಬ್ಬರೂ ಬಸವನಗುಡಿ ಈಜು ಕೇಂದ್ರ;35.60ಸೆ.)–3

ಗುಂಪು–1ರ 200 ಮೀ. ಬ್ಯಾಕ್‌ಸ್ಟ್ರೋಕ್‌: ಉತ್ಕರ್ಷ ಪಾಟೀಲ(ಬಸವನಗುಡಿ ಈಜು ಕೇಂದ್ರ;2:07.59ಸೆ.)–1, ಅಕ್ಷಯ ಶೇಠ್‌(ಗ್ಲೋಬಲ್‌ ಈಜು ಕೇಂದ್ರ;2.15.46ಸೆ.)–2, ಆಕಾಶ ಮಾಣಿ(ಬಸವನಗುಡಿ ಈಜು ಕೇಂದ್ರ;2.18.77)–3

ಸಬ್‌ ಜೂನಿಯರ್‌ ವಿಭಾಗ: ಗುಂಪು–3ರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಜಾಸ್‌ ಸಿಂಗ್‌(ಮತ್ಸ್ಯ ಐಎನ್‌ಸಿ;36.45ಸೆ.)–1, ವೈ.ರೆಯಾಂಶ ಕಂಠಿ(ಬಸವನಗುಡಿ ಈಜು ಕೇಂದ್ರ;39.55ಸೆ.)–2, ಅಥರ್ವ್‌ ಪಾಲ್‌ಸಿಂಗ್‌ ರಾಥೋಡ್‌(ಡಾಲ್ಫಿನ್‌ ಈಜು ಕೇಂದ್ರ;41.39ಸೆ.)–3

ಬಾಲಕಿಯರ ವಿಭಾಗ(ಜೂನಿಯರ್‌): ಗುಂಪು–2ರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ವಿಹಿಥಾ ನಯನಾ(34.96ಸೆ.)–1, ಮಾನವಿ ವರ್ಮಾ(35.39ಸೆ.)–2, ಹಿಯಾ ಮಚಂಡಾ(ಇಬ್ಬರೂ ಡಾಲ್ಫಿನ್‌ ಈಜು ಕೇಂದ್ರ; 37.34ಸೆ.)–3

ಗುಂಪು–1ರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಎಸ್‌.ಲಕ್ಷ್ಯ(ಬಸವನಗುಡಿ ಈಜು ಕೇಂದ್ರ; 35.84ಸೆ.)–1, ದಿಯಾ ಮಧುಕರ(ಡಾಲ್ಫಿನ್‌ ಈಜು ಕೇಂದ್ರ; 36.08ಸೆ.)–2, ಲಿನೇಯ್ಶಾ ಅನಿಲಕುಮಾರ(ಗ್ಲೋಬಲ್‌ ಈಜು ಕೇಂದ್ರ;36.10ಸೆ.)–3

ಗುಂಪು–1ರ 200 ಮೀ. ಬ್ಯಾಕ್‌ಸ್ಟ್ರೋಕ್‌: ರಿಧಿಮಾ ವೀರೇಂದ್ರಕುಮಾರ(ಬಸವನಗುಡಿ ಈಜು ಕೇಂದ್ರ;2:25.21ಸೆ.)–1, ಶಾಲಿನಿ ದೀಕ್ಷಿತ(ಡಾಲ್ಫಿನ್‌ ಈಜು ಕೇಂದ್ರ;2:30.10ಸೆ.)–2, ರಿತು ಭರಮರೆಡ್ಡಿ(ಬಸವನಗುಡಿ ಈಜು ಕೇಂದ್ರ; 2:36.12ಸೆ.)–3

ಸಬ್‌ ಜೂನಿಯರ್‌ ವಿಭಾಗ: ಗುಂಪು–3ರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಸಾನ್ವಿ ಮೈಗೂರ(ಡಿಕೆವಿ ಈಜು ಕೇಂದ್ರ;41.10ಸೆ.)–1, ಶೆಲಿನ್‌ ಸುನೀಲ(ಡಾಲ್ಫಿನ್‌ ಈಜು ಕೇಂದ್ರ;43.15ಸೆ.)–2, ಸ್ಪರ್ಶ ಹರೀಷ್‌(ಪೂಜಾ ಈಜು ಕೇಂದ್ರ;43.44ಸೆ.)–3

ಗುಂಪು ವಿಭಾಗ: ಬಾಲಕರ 4x50 ಫ್ರೀಸ್ಟೈಲ್‌: ಬಸವನಗುಡಿ ಈಜು ಕೇಂದ್ರ ‘ಎ’–1, ಮತ್ಸ್ಯ ಐಎನ್‌ಸಿ1–2, ಡಾಲ್ಫಿನ್‌ ಈಜು ಕೇಂದ್ರದ ‘ಎ’–3. 4x100 ಮೀ. ಮೆಡ್ಲೆ: ಬಸವನಗುಡಿ ಈಜು ಕೇಂದ್ರ ‘ಎ’–1, ಡಾಲ್ಫಿನ್‌ ಈಜು ಕೇಂದ್ರ ‘ಎ’–2, ಬಿಸಿಎ ‘ಬಿ’–3

ಬಾಲಕಿಯರ ವಿಭಾಗ: 4x50 ಮೀ ಫ್ರೀಸ್ಟೈಲ್‌: ಡಾಲ್ಫಿನ್‌ ಈಜು ಕೇಂದ್ರ ‘ಎ’–1,  ಡಾಲ್ಫಿನ್‌ ಈಜು ಕೇಂದ್ರ ‘ಬಿ’–2, ಡಿಕೆವಿ ಈಜು ಕೇಂದ್ರ–3; 4x100 ಮೆಡ್ಲೆ: ಬಸವನಗುಡಿ ಈಜು ಕೇಂದ್ರ ‘ಎ’–1, ಡಾಲ್ಫಿನ್‌ ಈಜು ಕೇಂದ್ರ ‘ಎ’–2, ಡಾಲ್ಫಿನ್‌ ಈಜು ಕೇಂದ್ರ ಬಿ–3.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು