ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ಸಬ್‌ಜೂನಿಯರ್‌ ಪುರುಷರ ಹಾಕಿ ಟೂರ್ನಿ: ಕ್ರಿಶ್‌ ಸುಜನ್‌ ಹ್ಯಾಟ್ರಿಕ್‌

Last Updated 2 ಡಿಸೆಂಬರ್ 2019, 15:32 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಶ್‌ ಸುಜನ್‌ ಗಳಿಸಿದ ಹ್ಯಾಟ್ರಿಕ್‌ ಗೋಲುಗಳ ಬಲದಿಂದ ಡಿವೈಇಎಸ್‌ ಕೂಡಿಗೆ ‘ಎ’ ತಂಡವು ಡಿವೈಇಎಸ್‌ ಶಿವಮೊಗ್ಗ ತಂಡವನ್ನು 8–0 ಅಂತರದಿಂದ ಮಣಿಸಿತು. ಸೋಮವಾರ ಇಲ್ಲಿನ ಶಾಂತಿನಗರದಲ್ಲಿರುವ ಕೆ.ಎಂ.ಕಾರ್ಯಪ್ಪ ಹಾಕಿ ಅರೆನಾದಲ್ಲಿ ಆರಂಭಗೊಂಡ ರಾಜ್ಯ ಮಟ್ಟದ ಪುರುಷರ ಸಬ್‌ಜೂನಿಯರ್‌ ಹಾಕಿ ಟೂರ್ನಿಯಲ್ಲಿ ಸುಜನ್‌ ಮಿನುಗಿದರು.

‘ಎ’ ಗುಂಪಿನ ಹಣಾಹಣಿಯಲ್ಲಿ ಸುಜನ್‌ಒಟ್ಟು ನಾಲ್ಕು ಗೋಲು (11, 34, 36 ಹಾಗೂ 38ನೇ ನಿಮಿಷ) ತಂದಿತ್ತು ಕೂಡಿಗೆ ‘ಎ’ ತಂಡದ ಸಂಭ್ರಮಕ್ಕೆ ಕಾರಣರಾದರು. ವಿಜೇತ ತಂಡದ ಪರ ನಕುಲ್‌ (10ನೇ ನಿಮಿಷ), ರೋಹಿತ್‌ (15ನೇ ನಿಮಿಷ), ತೇಜಸ್‌ (20ನೇ ನಿಮಿಷ) ಹಾಗೂ ಹರ್ಷ ಎಚ್‌.ಆರ್‌. (34ನೇ ನಿಮಿಷ) ಉಳಿದ ನಾಲ್ಕು ಗೋಲುಗಳನ್ನು ಹಂಚಿಕೊಂಡರು.

‘ಬಿ’ ಗುಂಪಿನ ಪಂದ್ಯದಲ್ಲಿ ದರ್ಶನ್‌ ಹೊಡೆದ ನಾಲ್ಕು ಗೋಲುಗಳು (8, 20, 29, 30ನೇ ನಿಮಿಷ) ಡಿವೈಇಎಸ್‌ ಬಳ್ಳಾರಿ ತಂಡದ ಗೆಲುವಿಗೆ ಕಾರಣವಾದವು. ಆ ತಂಡವು 7–2 ಗೋಲುಗಳಿಂದ ಕೂಡಿಗೆ ‘ಬಿ’ ತಂಡವನ್ನು ಸೋಲಿಸಿತು. ಬಳ್ಳಾರಿ ಪರ ದರ್ಶನ್‌ ನಾಯ್ಕ್‌ ಕೂಡ ಹ್ಯಾಟ್ರಿಕ್‌ ಗಳಿಸಿ (14, 19, 26ನೇ ನಿಮಿಷ) ಜಯ ಸುಲಭವಾಗಿಸಿದರು. ಕೂಡಿಗೆ ‘ಬಿ’ ತಂಡದ ವಿಕಾಸ್‌ ಗೌಡ ಎಚ್‌.ಬಿ (28ನೇ ನಿಮಿಷ) ಹಾಗೂ ಅಮೋಘ ಎಸ್‌. (38ನೇ ನಿಮಿಷ) ಯಶಸ್ಸು ಕಂಡರು.

‘ಬಿ’ ಗುಂಪಿನ ಮತ್ತೊಂದು ಹಣಾಹಣಿಯಲ್ಲಿ ಡಿವೈಇಎಸ್‌ ಪೊನ್ನಂಪೇಟೆ ತಂಡವು ಹಾಕಿ ಧಾರವಾಡ ಎದುರು 10–0ಯಿಂದ ಜಯ ಸಾಧಿಸಿತು. ಪೊನ್ನಂಪೇಟೆ ಪರ ಧ್ರುವಿನ್‌ ಡಿ. (2ನೇ ನಿಮಿಷ), ಭೀಮಯ್ಯ ಸಿ.‍ಪಿ. (10, 33ನೇ ನಿಮಿಷ), ಉಜ್ವಲ್ ಪಿ.ಎಸ್‌. (12, 35ನೇ ನಿಮಿಷ), ವಚನ್‌ ಎಚ್‌.ಎ. (17ನೇ ನಿಮಿಷ) ಆರ್ಯನ್ ಎಂ.ಟಿ (19ನೇ ನಿಮಿಷ), ಸಪನ್‌.ಪಿ.ಪಿ. (21ನೇ ನಿಮಿಷ), ಗೌರವ್‌ ಸಿ.ಎಂ. (27ನೇ ನಿಮಿಷ) ಹಾಗೂ ನಾಚಪ್ಪ ಎನ್‌.ಬಿ. (32ನೇ ನಿಮಿಷ) ಗೋಲು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT