ಬುಧವಾರ, ಜನವರಿ 22, 2020
25 °C
ರಾಜ್ಯಮಟ್ಟದ ಸಬ್‌ಜೂನಿಯರ್‌ ಹಾಕಿ ಟೂರ್ನಿ

ಡಿವೈಇಎಸ್‌ ಪೊನ್ನಂಪೇಟೆ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಪಿನ್‌. ಬಿ.ಆರ್‌. ಎರಡು ಗೋಲು ಗಳಿಸಿ ಮಿಂಚಿದರು. ಅವರ ಆಟದ ಬಲದಿಂದ ಡಿವೈಇಎಸ್‌ ಪೊನ್ನಂಪೇಟೆ ತಂಡವು ರಾಜ್ಯಮಟ್ಟದ ಸಬ್‌ಜೂನಿಯರ್‌ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಧರಿಸಿತು.

ಇಲ್ಲಿನ ಶಾಂತಿನಗರದಲ್ಲಿರುವ ಕೆ.ಎಂ.ಕಾರ್ಯಪ್ಪ ಹಾಕಿ ಅರೆನಾದಲ್ಲಿ ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಪೊನ್ನಂಪೇಟೆ ತಂಡವು ಡಿವೈಇಎಸ್‌ ಕೂಡಿಗೆ ‘ಎ’ ತಂಡವನ್ನು 3–0ಯಿಂದ ಮಣಿಸಿತು. ವಿಜೇತ ತಂಡದ ಬಿಪಿನ್‌ ಅವರು 23 ಹಾಗೂ 29ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ತಿಮ್ಮಯ್ಯ (2ನೇ ನಿಮಿಷ) ಒಂದು ಗೋಲು ಹೊಡೆದರು.

ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಡಿವೈಇಎಸ್‌ ಬಳ್ಳಾರಿ ತಂಡವು ಹಾಕಿ ಕೂರ್ಗ್‌ ಎದುರು 1–0ಯಿಂದ ಗೆದ್ದಿತು. ಬಳ್ಳಾರಿ ಪರ ರುದ್ರಪ್ಪ 7ನೇ ನಿಮಿಷ ಯಶಸ್ಸು ಕಂಡರು.

ವೈಯಕ್ತಿಕ ಪ್ರಶಸ್ತಿಗಳು: ಅತ್ಯುತ್ತಮ ಗೋಲ್‌ಕೀಪರ್‌–ಮಾಜ್‌ (ಡಿವೈಇಎಸ್‌ ಕೂಡಿಗೆ), ಅತ್ಯುತ್ತಮ ಫುಲ್‌ ಬ್ಯಾಕ್‌ ಆಟಗಾರ–ಪೂನಚ್ಚ ಸಿ.ಜಿ. (ಹಾಕಿ ಕೂರ್ಗ್‌), ಅತ್ಯುತ್ತಮ ಹಾಫ್‌ ಬ್ಯಾಕ್‌ ಆಟಗಾರ–ದರ್ಶನ್‌ ನಾಯ್ಕ್‌ (ಡಿವೈಇಎಸ್‌ ಬಳ್ಳಾರಿ), ಅತ್ಯುತ್ತಮ ಫಾವರ್ಡ್‌ ಆಟಗಾರ–ಸಪನ್‌ ಪಿ.ಪಿ. (ಡಿವೈಇಎಸ್‌ ಪೊನ್ನಂಪೇಟೆ), ಟೂರ್ನಿಯ ಶ್ರೇಷ್ಠ ಆಟಗಾರ– ಬಿಪಿನ್‌.ಬಿ.ಆರ್‌. (ಡಿವೈಇಎಸ್‌ ಪೊನ್ನಂಪೇಟೆ).

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು