ಬುಧವಾರ, ಡಿಸೆಂಬರ್ 2, 2020
17 °C

ಸೈಕಿಕ್ ಫೋರ್ಸ್‌ಗೆ ರೋಚಕ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶನಿವಾರದ ಬೆಂಗಳೂರು ಬೇಸಿಗೆ ರೇಸ್‌ಗಳ ಪ್ರಧಾನ ಆಕರ್ಷಣೆ ‘ಕೆ.ಎನ್‌.ಗುರುಸ್ವಾಮಿ ಮೆಮೋರಿಯಲ್‌ ಟ್ರೋಫಿ’ ಒಂದು ಮೈಲು ದೂರದ ರೇಸ್‌ನಲ್ಲಿ ಡಾರಿಯಾಸ್‌ ಬೈರಾಮ್ಜಿ ತರಬೇತಿಯಲ್ಲಿ ಪಳಗಿರುವ ’ಸೈಕಿಕ್‌ ಫೋರ್ಸ್’ ರೋಚಕ ಜಯ ಗಳಿಸಿದೆ.

ಮುಕ್ತ ರೇಸ್‌ ಆಗಿ ಕಂಡು ಬರುತ್ತಿದ್ದ ಈ ರೇಸ್‌ನಲ್ಲಿ ’ಆಂಬ್ರೋಸಿಯೊ’ 2/1 ಬೇಡಿಕೆಯ ಫೇವರಿಟ್‌ ಆಗಿದ್ದರೆ, ‘ಸೈಕಿಕ್‌ ಫೋರ್ಸ್’ 8/1 ಬೇಡಿಕೆಯಲ್ಲಿತ್ತು. ಕೊನೆಯ ನೇರ ಓಟದಲ್ಲಿ, ಇನ್ನೂ ಒಂದು ಫರ್ಲಾಂಗ್‌ ಇರುವಂತೆಯೆ ಎಸ್‌.ಜರ್ವಾನ್‌ ಸವಾರಿಯಲ್ಲಿದ್ದ ’ಸೈಕಿಕ್‌ ಫೋರ್ಸ್’ ರಭಸದಿಂದ ಮುನ್ನುಗ್ಗಿ ಮುನ್ನಡೆ ಪಡೆಯಿತು.

ಕೊನೆಯ 150 ಮೀಟರ್ಸ್‌ನಲ್ಲಿ ‘ಆಂಬ್ರೋಸಿಯೊ’ ಭಾರಿ ಹೋರಾಟ ನಡೆಸಿದರೂ, ’ಸೈಕಿಕ್‌ ಫೋರ್ಸ್’ ತನ್ನ ಮುನ್ನಡೆ ಕಾಯ್ದು ಕಾದುಕೊಂಡು ನೆಕ್ ಅಂತರದ ಗೆಲುವು ಪಡೆಯಿತು. ’ಶೀಈಸ್‌ಮೈಸ್ಕ್ರಿಪ್ಟ್‌’ ಮತ್ತು ’ನ್ಯೂ ಕ್ರಿಯೇಶನ್‌’ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು