ಮೈಸೂರು: ಕೆ.ಜೆ.ಆಕಾಶ್ ಮತ್ತು ಎ.ನಿಹಾರಿಕಾ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಸಬ್ ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.

ಮೈಸೂರು ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ವಿ.ವಿ. ಜಿಮ್ನೇಷಿಯಂ ಹಾಲ್‌ನಲ್ಲಿ ಶನಿವಾರ ನಡೆದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಎಂಎಸ್‌ಎಸ್‌ನ ನಿಹಾರಿಕಾ 13-11,11-6,11-8 ರಲ್ಲಿ ಎಸ್‌ಬಿಟಿಯ ಕರುಣಾ ಗಜೇಂದ್ರನ್ ವಿರುದ್ಧ ಗೆದ್ದರು.

ಸೆಮಿಫೈನಲ್‌ಗಳಲ್ಲಿ ಕರುಣಾ 11-5,12-10,9-11,9-11,12-10 ರಲ್ಲಿ ತೃಪ್ತಿ ಪುರೋಹಿತ್ ವಿರುದ್ಧ; ನಿಹಾರಿಕಾ 3-11,9-11,11-8,16-14,12-10ರಲ್ಲಿ ಸಹನಾ ಎಚ್.ಮೂರ್ತಿ ಎದುರು ಗೆದ್ದರು. ಬಾಲಕರ ವಿಭಾಗದ ಫೈನಲ್‌ನಲ್ಲಿ ಆಕಾಶ್, ಪಿ.ವಿ.ಶ್ರೀಕಾಂತ್ ಕಶ್ಯಪ್ ವಿರುದ್ಧ ಪೈಪೋಟಿ ನಡೆಸಿದರು. ಗಾಯದ ಕಾರಣ ಶ್ರೀಕಾಂತ್ ಅರ್ಧದಲ್ಲೇ ಹಿಂದೆ ಸರಿದರು. ಸೆಮಿಫೈನಲ್‌ಗಳಲ್ಲಿ ಆಕಾಶ್ 8-11,11-5,11-2,11-9 ರಲ್ಲಿ ಪಿ.ಯಶ್ವಂತ್ ವಿರುದ್ಧ; ಶ್ರೀಕಾಂತ್ 11-8,11-9,11-8 ರಲ್ಲಿ ಸುಜನ್.ಭಾರದ್ವಾಜ್ ಎದುರು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.