ಗುರುವಾರ , ಅಕ್ಟೋಬರ್ 6, 2022
22 °C

ಟಿಟಿ: ತೇಶುಭ್, ನೀತಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತೇಶುಭ್‌ ದಿನೇಶ್‌ ಮತ್ತು ನೀತಿ ಅಗರವಾಲ್‌ ಅವರು ಇಲ್ಲಿ ನಡೆಯುತ್ತಿರುವ ಎಂ.ಎಸ್‌.ರಾಮಯ್ಯ ಸ್ಮಾರಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ 15 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆದರು.

ಬಾಲಕರ ವಿಭಾಗದ ಫೈನಲ್‌ನಲ್ಲಿ ಚೆಕ್‌ಮೇಟ್‌ನ ತೇಶುಭ್‌ 11-7, 11-5, 10-12, 11-3, 7-11, 12-10 ರಲ್ಲಿ ಕೆ.ಆಯುಷ್‌ ಅವರನ್ನು ಮಣಿಸಿದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ತೇಶುಭ್‌ 11-8, 14-12, 11-4, 11-9 ರಲ್ಲಿ ಅಥರ್ವ ನವರಂಗೆ ವಿರುದ್ಧ; ಆಯುಷ್‌ 11-6, 11-3, 11-4, 11-6 ರಲ್ಲಿ ಸಿದ್ಧಾಂತ್‌ ವಾಸನ್‌ ವಿರುದ್ಧ ಗೆದ್ದಿದ್ದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಚೆಕ್‌ಮೇಟ್‌ನ ನೀತಿ 11-3, 13-11, 10-12, 9-11, 9-11, 11-8, 12-10 ರಲ್ಲಿ ಪ್ರಣವಿ ಎದುರು ಪ್ರಯಾಸದಿಂದ ಗೆದ್ದರು. ಮೊದಲ ಎರಡು ಗೇಮ್‌ ಗೆದ್ದಿದ್ದ ನೀತಿ, ಬಳಿಕದ ಮೂರು ಗೇಮ್‌ಗಳಲ್ಲಿ ಸೋತು 2–3 ರಲ್ಲಿ ಹಿನ್ನಡೆ ಅನುಭವಿಸಿದರು. ಕೊನೆಯ ಎರಡು ಗೇಮ್‌ ಗೆದ್ದು ಪಂದ್ಯ ತಮ್ಮದಾಗಿಸಿಕೊಂಡರು.

ಸೆಮಿಫೈನಲ್‌ನಲ್ಲಿ ಪ್ರಣವಿ 9-11, 8-11, 13-11, 11-7, 11-9, 11-7 ಸಾನ್ವಿ ವಿರುದ್ಧ; ನೀತಿ 11-3, 13-11, 11-4, 6-11, 14-12 ರಲ್ಲಿ ಆಯುಷಿ ಗೋಡ್ಸೆ ಎದುರು ಜಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು