ಮಂಗಳವಾರ, ನವೆಂಬರ್ 30, 2021
23 °C

ಪರ್ಪಲ್ ಕಪ್ ಗಾಲ್ಫ್ ಟೂರ್ನಿ: ಗಾಲ್ಫರ್ ಶುಭಂಕರ್ ಶರ್ಮಾ ಜೊತೆ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎನೇಬಲ್ ಇಂಡಿಯಾ ಸಹಯೋದಲ್ಲಿ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್ ಆಯೋಜಿಸಿರುವ ‘ದಿ ಪರ್ಪಲ್ ಕಪ್’ ಗಾಲ್ಫ್ ಟೂರ್ನಿಯು ರಾಜ್ಯ ಗಾಲ್ಫ್ ಸಂಸ್ಥೆಯ ಆವರಣದಲ್ಲಿ ಗುರುವಾರ ನಡೆಯಲಿದೆ. ಟೂರ್ನಿಯ ಅಂಗವಾಗಿ ಸಂಜೆ ಶುಭಂಕರ್ ಶರ್ಮಾ ಜೊತೆ ಮಾತುಕತೆಯೂ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. 

ಬೆಳಿಗ್ಗೆ 6 ಗಂಟೆಗೆ ಸ್ಪರ್ಧೆಗಳು ನಡೆಯಲಿವೆ. ಇಲ್ಲಿ ಸಂಗ್ರಹವಾಗುವ ಮೊತ್ತವನ್ನು ಭಾರತದ ಪ್ರಪ್ರಥಮ ಅಂಧರ ಗಾಲ್ಫ್ ತಂಡಕ್ಕಾಗಿ ನೀಡಲಾಗುವುದು. ಅಂಗವೈಕಲ್ಯ ಇರುವವರಿಗಾಗಿ ಎನೇಬಲ್ ಇಂಡಿಯಾ ಫೌಂಡೇಷನ್‌ ನಡೆಸುವ ಸಾಮಾಜಿಕ ಕಾರ್ಯಗಳಿಗೂ ಇದರ ಪಾಲು ಸಲ್ಲಲಿದೆ ಎಂದು ತಿಳಿಸಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 5.30ಕ್ಕೆ ಆರಂಭವಾಗಲಿದ್ದು ಗಾಲ್ಫರ್ ಶುಭಂಕರ್ ಶರ್ಮಾ ಜೊತೆ ಸಂದೀಪ್ ರಾವ್‌ ಅವರ ಮಾತುಕತೆ ಈ ಸಂದರ್ಭದಲ್ಲಿ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು