ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ರೋಯಿಂಗ್‌- ರಿಪೇಚ್ ಸುತ್ತಿಗೆ ಅರವಿಂದ್‌, ಅರ್ಜುನ್‌

Last Updated 24 ಜುಲೈ 2021, 12:33 IST
ಅಕ್ಷರ ಗಾತ್ರ

ಟೋಕಿಯೊ: ಅರವಿಂದ್‌ ಸಿಂಗ್ ಮತ್ತು ಅರ್ಜುನ್ ಲಾಲ್ ಜಾಟ್ ಅವರನ್ನೊಳಗೊಂಡ ಭಾರತದ ರೋಯಿಂಗ್ ತಂಡ ಒಲಿಂಪಿಕ್ಸ್‌ನ ಲೈಟ್‌ವೇಟ್‌ ಡಬಲ್‌ ಸ್ಕಲ್ಸ್ ವಿಭಾಗದಲ್ಲಿ ರಿಪೇಚ್ ಸುತ್ತು ಪ್ರವೇಶಿಸಿದೆ. ಶನಿವಾರ ನಡೆದ ಹೀಟ್ಸ್‌ನಲ್ಲಿ ಐದನೇ ಸ್ಥಾನ ಗಳಿಸಿರುವ ತಂಡವು ಪದಕದ ಭರವಸೆಯನ್ನು ಕೈಬಿಟ್ಟಿಲ್ಲ.

ಹೀಟ್‌ ಎರಡರ ಸರ್ಧೆಯಲ್ಲಿ ನೀರಿಗಿಳಿದಿದ್ದ ಭಾರತ ಜೋಡಿಯು 6 ನಿಮಿಷ 40.33 ಸೆಕೆಂಡುಗಳಲ್ಲಿ ಗುರಿ ತಲುಪಿತು. ಆ ಮೂಲಕ ಆರು ತಂಡಗಳಿದ್ದ ಸ್ಪರ್ಧೆಯಲ್ಲಿ ಐದನೇ ಸ್ಥಾನ ಗಳಿಸಿತು. ಸೆಮಿಫೈನಲ್ ತಲುಪಲು ವಿಫಲವಾಯಿತು. ಆದರೆ ರಿಪೇಚ್ ಸುತ್ತು ತಲುಪಿದವರಿಗೆ ಕ್ವಾರ್ಟರ್‌ಫೈನಲ್‌, ಸೆಮಿಫೈನಲ್ ಅಥವಾ ಫೈನಲ್ ತಲುಪಲು ಮತ್ತೊಂದು ಅವಕಾಶ ಇರುತ್ತದೆ.

ಹೀಟ್ಸ್‌ನಲ್ಲಿ ಅಗ್ರ ಎರಡು ಸ್ಥಾನ ಪಡೆದ ಐರ್ಲೆಂಡ್ (6 ನಿ. 23.74 ಸೆ.) ಮತ್ತು ಜೆಕ್ ಗಣರಾಜ್ಯ (6 ನಿ. 28.10 ಸೆ.) ತಂಡಗಳು ಸೆಮಿಫೈನಲ್ ತಲುಪಿದವು. ಭಾರತ ತಂಡದೊಂದಿಗೆ ಪೋಲೆಂಡ್, ಉಕ್ರೇನ್‌ ಮತ್ತು ಉರುಗ್ವೆ ತಂಡಗಳೂ ರಿಪೇಚ್ ಸುತ್ತು ಪ್ರವೇಶಿಸಿದವು.

ಅರ್ಜುನ್ ಬೋವರ್ ಪಾತ್ರವನ್ನು ವಹಿಸಿಕೊಂಡರೆ, ಅರವಿಂದ್ ಸ್ಟ್ರೋಕರ್ ಆಗಿದ್ದರು. 1500 ಮೀಟರ್ ತನಕ ಹಿಂದುಳಿದಿದ್ದ ಇವರಿಬ್ಬರು ನಂತರ ವೇಗವನ್ನು ಹೆಚ್ಚಿಸಿಕೊಂಡರು.

ಪ್ರತಿ ಪುರುಷ ರೋಯಿಂಗ್‌ ಸ್ಪರ್ಧಿಗೆ 72.5 ಕೆಜಿ ಗರಿಷ್ಠ ತೂಕವನ್ನು ನಿಗದಿಪಡಿಸಲಾಗಿದೆ. ಸರಾಸರಿ ತೂಕ 70 ಕೆಜಿ ಮೀರಬಾರದು. ಮಹಿಳಾ ಸ್ಪರ್ಧಿಗೆ ಗರಿಷ್ಠ ತೂಕವನ್ನು 59 ಕೆಜಿಗೆ ನಿಗದಿ ಮಾಡಲಾಗಿದೆ. ಇವರ ಸರಾಸರಿ 57 ಕೆಜಿ ಮೀರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT