ಮಂಗಳವಾರ, ಸೆಪ್ಟೆಂಬರ್ 21, 2021
21 °C

Tokyo Olympics: ಮೀರಾಬಾಯಿಗೆ ಪಿಜ್ಜಾ ಕಾಣಿಕೆ !

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ರಚಿಸಿದ್ದ ಮೀರಾಬಾಯಿ ಚಾನುಗೆ ಬದುಕಿರುವವರೆಗೂ ಪಿಜ್ಜಾ ಉಚಿತವಾಗಿ ನೀಡಲು ಡೊಮಿನೊಸ್‌ ಸಂಸ್ಥೆ ನಿರ್ಧರಿಸಿದೆ.

ಪದಕ ಗೆದ್ದ ನಂತರ ಶನಿವಾರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೀರಾ ‘ಪಿಜ್ಜಾ ತಿಂದು ಬಹಳ ದಿನಗಳಾಗಿಬಿಟ್ಟಿವೆ. ಈಗ ಪಿಜ್ಜಾ ಸವಿಯುವ ಮನಸ್ಸಾಗುತ್ತಿದೆ. ಇವತ್ತು ಹೊಟ್ಟೆಬಿರಿಯುವಷ್ಟು ತಿಂದುಬಿಡುತ್ತೇನೆ’ ಎಂದಿದ್ದರು.

ಈ ವಿಡಿಯೊವನ್ನು ಡೊಮಿನೊಸ್‌ ಸಂಸ್ಥೆಯ (ಭಾರತ) ಸಿಇಒ ಪ್ರತೀಕ್‌ ಅವರಿಗೆ ಟ್ಯಾಗ್‌ ಮಾಡಲಾಗಿತ್ತು. ವಿಡಿಯೊ ನೋಡಿದ ಪ್ರತೀಕ್‌, ಇಂಫಾಲದಲ್ಲಿರುವ ಮೀರಾಬಾಯಿ ಮನೆಗೆ ಸಂಸ್ಥೆಯ ಸಿಬ್ಬಂದಿಯನ್ನು ಕಳುಹಿಸಿ ಮನೆಯವರಿಗೆಲ್ಲಾ ಪಿಜ್ಜಾ ಉಚಿತವಾಗಿ ವಿತರಿಸುವ ವ್ಯವಸ್ಥೆ ಮಾಡಿದ್ದರು. ಆ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

‘ನೀವು ಹೇಳಿದನ್ನು ನಾವು ಆಲಿಸಿದ್ದೇವೆ (ಆಪ್ನೆ ಕಹಾ ಔರ್‌ ಹಮ್ನೆ ಸುನ್‌ ಲಿಯಾ). ಮೀರಾ ಇನ್ನು ಮುಂದೆ ಪಿಜ್ಜಾ ಸವಿಯಲು ಕಾಯಬೇಕಿಲ್ಲ. ಅದಕ್ಕೆ ನಾವು ಆಸ್ಪದ ನೀಡುವುದಿಲ್ಲ. ಬದುಕಿರುವವರೆಗೂ ಅವರಿಗೆ ಪಿಜ್ಜಾ ಉಚಿತವಾಗಿ ಪೂರೈಸುತ್ತೇವೆ’ ಎಂದು ಡೊಮಿನೊಸ್‌ ಪಿಜ್ಜಾ ಟ್ವೀಟ್‌ ಮಾಡಿದೆ.

‘ಮನೆ ಹಾಗೂ ಮನೆಯವರ ಮುಖ ನೋಡಿ ವರ್ಷಗಳೇ ಉರುಳಿವೆ. ಹೀಗಾಗಿ ಭಾರತ ತಲುಪಿದ ಕೂಡಲೇ ನೇರವಾಗಿ ಮನೆಗೆ ಹೋಗುತ್ತೇನೆ’ ಎಂದೂ ಮೀರಾ ತಿಳಿಸಿದ್ದರು.

ಅದೃಷ್ಟದ ಕಿವಿಯೋಲೆ

ಮೀರಾಬಾಯಿ ಶನಿವಾರ ಧರಿಸಿದ್ದ ಕಿವಿಯೋಲೆ ಎಲ್ಲರ ಗಮನ ಸೆಳೆಯಿತು. 

ಒಲಿಂಪಿಕ್‌ ರಿಂಗ್‌ಗಳ ಆಕಾರದ ಈ ಓಲೆಯನ್ನು ಅವರ ತಾಯಿ ಒಂಗ್ಬಿ ತೋಂಬಿ ಲೀಮಾ ಐದು ವರ್ಷಗಳ ಹಿಂದೆ ಮಾಡಿಸಿಕೊಟ್ಟಿದ್ದರು. ಇದಕ್ಕಾಗಿ ತಮ್ಮ ಬಳಿ ಇದ್ದ ಎಲ್ಲಾ ಚಿನ್ನದ ಒಡವೆಗಳನ್ನು ಮಾರಿದ್ದರು. ಮಗಳಿಗೆ ಅದೃಷ್ಟ ಒಲಿಯಲಿ ಎಂಬುದು ಅವರ ಉದ್ದೇಶವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು