ಮಂಗಳವಾರ, ಸೆಪ್ಟೆಂಬರ್ 21, 2021
29 °C

Tokyo Olympics: ಮಹಿಳಾ ಹಾಕಿ ತಂಡಕ್ಕೆ ಆರಂಭಿಕ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಮಹಿಳಾ ಹಾಕಿಯಲ್ಲಿ ಭಾರತ ತಂಡ ಜಯದ ಆರಂಭ ಪಡೆಯಲು ವಿಫಲವಾಯಿತು.

‘ಎ’ ಗುಂಪಿನ ಹಣಾಹಣಿಯಲ್ಲಿ 1–5 ಗೋಲುಗಳಿಂದ ನೆದರ್ಲೆಂಡ್ಸ್‌ಗೆ ಶರಣಾಯಿತು.

ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ದಿಟ್ಟ ಸಾಮರ್ಥ್ಯ ತೋರಿದ ರಾಣಿ ರಾಂಪಾಲ್‌ ಬಳಗ ದ್ವಿತೀಯಾರ್ಧದಲ್ಲಿ ಸಂಪೂರ್ಣವಾಗಿ ಮಂಕಾಯಿತು.

ಮೂರು ಬಾರಿಯ ಚಾಂಪಿಯನ್‌ ಹಾಗೂ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪ‍ದಕ ಜಯಿಸಿದ್ದ ನೆದರ್ಲೆಂಡ್ಸ್‌ 6ನೇ ನಿಮಿಷದಲ್ಲಿ ಖಾತೆ ತೆರೆಯಿತು. ಫೆಲಿಸ್‌ ಅಲ್ಬರ್ಸ್‌ ಗೋಲು ಬಾರಿಸಿದರು. ಇದರ ಬೆನ್ನಲ್ಲೇ (10ನೇ ನಿಮಿಷ) ಕೈಚಳಕ ತೋರಿದ ರಾಣಿ ರಾಂಪಾಲ್‌ ಸಮಬಲಕ್ಕೆ ಕಾರಣರಾದರು. ಎರಡನೇ ಕ್ವಾರ್ಟರ್‌ನಲ್ಲಿ ಯಾವ ತಂಡಕ್ಕೂ ಗೋಲು ದಕ್ಕಲಿಲ್ಲ. ಭಾರತದ ಗೋಲ್‌ಕೀಪರ್‌ ಸವಿತಾ ಪುನಿಯಾ ಎದುರಾಳಿಗಳ ಪ್ರಯತ್ನಗಳನ್ನು ವಿಫಲಗೊಳಿಸಿ ಎಲ್ಲರ ಗಮನ ಸೆಳೆದರು.

ವಿರಾಮದ ಬಳಿಕ ನೆದರ್ಲೆಂಡ್ಸ್‌ ಆಟಗಾರ್ತಿಯರು ಪ್ರಾಬಲ್ಯ ಮೆರೆದರು. ಮಾರ್ಗಟ್‌ ವಾನ್‌ ಗೆಫೆನ್‌ (33), ಫೆಲಿಸ್‌ ಅಲ್ಬರ್ಸ್‌ (43), ಫ್ರೆಡೆರಿಕ್‌ ಮಟ್ಲಾ (45) ಹಾಗೂ ಸಿಯಾ ಜಾಕ್ವೆಲಿನ್‌ ವಾನ್‌ ಮಾಸಕ್ಕರ್‌ (52) ಭಾರತದ ರಕ್ಷಣಾ ಕೋಟೆಯನ್ನು ಧ್ವಂಸಗೊಳಿಸಿದರು. ಪಂದ್ಯದಲ್ಲಿ ಈ ತಂಡ ಆರು ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿತ್ತು. ಇದು ನೆದರ್ಲೆಂಡ್ಸ್‌ ತಂಡದ ಆಕ್ರಮಣಕಾರಿ ಆಟಕ್ಕೆ ಸಾಕ್ಷಿ.

ವಿಶ್ವ ರ‍್ಯಾಂಕಿಂಗ್‌

ಭಾರತ: 10

ನೆದರ್ಲೆಂಡ್ಸ್‌: 1          

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು