ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಅಥವಾ ಕನಿಷ್ಠ ಪದಕ ಗೆಲ್ಲುವುದಾಗಿ ಹೇಳಿ ಹೋಗಿದ್ದ ಮೀರಾಬಾಯಿ ಚಾನು

Last Updated 24 ಜುಲೈ 2021, 11:58 IST
ಅಕ್ಷರ ಗಾತ್ರ

ಇಂಫಾಲ್:ಮೀರಾಬಾಯಿ ಚಾನು ಟೋಕಿಯೊದಲ್ಲಿ ಪದಕ ಗೆಲ್ಲಲೇಬೇಕೆಂದು ಪಣತೊಟ್ಟು ವೇಟ್ ಲಿಫ್ಟಿಂಗ್ ರಂಗಕ್ಕೆ ಇಳಿಯಲು ಸಂಜಾಗುತ್ತಿದ್ದರೆ, ಇತ್ತ ಮಣಿಪುರದ ಅವರ ಮನೆಯಲ್ಲಿ ಆ ಅದ್ಬುತ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲು ಸಿದ್ಧತೆ ನಡೆದಿತ್ತು.

‘ಚಿನ್ನ ಅಥವಾ ಕನಿಷ್ಠ ಯಾವುದಾದರೊಂದು ಪದಕವನ್ನು ಗೆಲ್ಲುವುದಾಗಿ ಅವಳು ನಮಗೆ ಹೇಳಿದ್ದಳು. ಆದ್ದರಿಂದ, ಅವಳು ಪದಕ ಗೆಲ್ಲಬಹುದೆಂದುಎಲ್ಲರೂ ಕಾಯುತ್ತಿದ್ದರು. ದೂರದ ಊರುಗಳಲ್ಲಿ ವಾಸಿಸುತ್ತಿದ್ದ ನಮ್ಮ ಸಂಬಂಧಿಕರಲ್ಲಿ ಅನೇಕರು ನಿನ್ನೆ ಸಂಜೆಯೇ ಬಂದರು. ಅವರು ನಮ್ಮೊಂದಿಗೆ ರಾತ್ರಿಯಿಡೀ ಇದ್ದರು.’ಎಂದು ಚಾನು ಅವರ ತಾಯಿ ಸೈಖೋಮ್ ಒಂಗ್ಬಿ ಟೋಂಬಿ ಲೀಮಾ ಹೇಳಿದ್ದಾರೆ.

‘ಇಂದು ಬೆಳಿಗ್ಗೆ ಅನೇಕರು ಬಂದರು ಮತ್ತು ಇಲ್ಲಿನ ಸುತ್ತಮುತ್ತಲ ಪ್ರದೇಶದ ಜನರು ಕೂಡ ಸೇರಿದ್ದರು. ಆದ್ದರಿಂದ, ನಾವು ಟಿವಿಯನ್ನು ವರಾಂಡಾಗೆ ತಂದಿದ್ದೆವು. ಟೋಕಿಯೊದಲ್ಲಿ ಮೀರಾಬಾಯಿ ಸಾಧನೆಯನ್ನು ಟಿವಿಯಲ್ಲಿ ವೀಕ್ಷಿಸಲು ಸುಮಾರು 50 ಜನರು ಅಲ್ಲಿದ್ದರು. ಆದ್ದರಿಂದ, ಅದು ಒಂದು ರೀತಿಯ ಹಬ್ಬದಂತಿತ್ತು.’ ಎಂದಿದ್ದಾರೆ.

ಚಿನ್ನದ ನಿರೀಕ್ಷೆ ಇದ್ದರೂ ಬೆಳ್ಳಿ ಗೆದ್ದದ್ದು ಚಾನು ಮನೆಯವರಿಗೆ ತೃಪ್ತಿ ನೀಡಿತ್ತು.

ವೇಟ್ ಲಿಫ್ಟಿಂಗ್ ಆರಂಭಕ್ಕೂ ಮುನ್ನ ಟೋಕಿಯೊದಿಂದ ಮನೆಯವರಿಗೆ ವಿಡಿಯೊ ಕಾಲ್ ಮಾಡಿದ್ದ ಚಾನು ಆಶೀರ್ವಾದ ಪಡೆದಿದ್ದರು. ದೇಶಕ್ಕಾಗಿ ಚಿನ್ನ ಗೆಲ್ಲಲು ಆಶೀರ್ವದಿಸಿ ಎಂದು ಚಾನು ಕೇಳಿದ್ದಳು. ಅದೊಂದು ಸ್ಮರಣೀಯ ಕ್ಷಣ ಎಂದುಮನೆಯ ಸದಸ್ಯರು ಹೇಳಿದ್ದಾರೆ.

ಚಾನು ಅವರಿಗೆ ಮೂವರು ಸಹೋದರಿಯರು ಮತ್ತು ಇಬ್ಬರು ಸಹೋದರರಿದ್ದು, ಎಲ್ಲರೂ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT